Ticker

6/recent/ticker-posts

Ad Code

ಇಡಿಯಡ್ಕ ಕ್ಷೇತ್ರ ಜಾತ್ರಾ ಮಹೋತ್ಸವ : ಇಂದು ಕಜಂಬು ಉತ್ಸವ, ಉಳ್ಳಾಲ್ತಿ ನೇಮ

 

ಪೆರ್ಲ : ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ  ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜರಗುತ್ತಿದ್ದು, ಇಂದು ಕಜಂಬು ಉತ್ಸವ, ಉಳ್ಳಾಲ್ತಿ ನೇಮ ಜರಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಚಂಡಿಕಾ ಹವನ, ಪೂರ್ಣಾಹುತಿ,  ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ಜರಗಲಿದೆ. ಸಂಜೆ ಗಂಟೆ 6ರಿಂದ ಕಜಂಬು ಉತ್ಸವ, ರಾತ್ರಿ  7.30ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8ಕ್ಕೆ ಶ್ರೀ ಉಳ್ಳಾಲ್ತಿ ಭಂಡಾರ ಹೊರಡುವುದು, ಅಶ್ವರಥ ಸವಾರಿ, ಉಳ್ಳಾಲ್ತಿ ನೇಮ, ಪ್ರಸಾದ ವಿತರಣೆ. 

ನಾಳಿನ ಕಾರ್ಯಕ್ರಮ : ಫೆ 4ರಂದು ಬೆಳಗ್ಗೆ ಗಂಟೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ರಾತ್ರಿ  8ರಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, ರಾತ್ರಿ ಗಂಟೆ 8.30ಕ್ಕೆ ತೊಡಂಙಲ್, ಕುಳಿಚ್ಚಾಟ, ಸಂಜೆ ಗಂಟೆ 6ರಿಂದ ಶ್ರೀ ಉಳ್ಳಾಲ್ತಿ ಮಹಿಳಾ ಸಂಘ, ಇಡಿಯಡ್ಕ ಇವರಿಂದ ತಿರುವಾದಿರ, ಸಾಯಂ. ಗಂಟೆ 7.00 ರಿಂದ ಕಲಾತಪಸ್ವಿ, ನಾಟ್ಯಸಿಂಧು, ನಾಟ್ಯನಿಲಯ ಗುರು  ಬಾಲಕೃಷ್ಣ ಮಂಜೇಶ್ವರ ಇವರ ನಿರ್ದೇಶನದಲ್ಲಿ ಭರತನಾಟ್ಯ, 'ನೃತ್ಯ ಆಕರ್ಷಣಂ' ಪ್ರದರ್ಶನಗೊಳ್ಳಲಿದೆ.

ಫೆ.5ರಂದು ಬೆಳಗ್ಗೆ ಗಂಟೆ 9ರಿಂದ  ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 12.30ಕ್ಕೆ ಧ್ವಜಾವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆಯೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.

Post a Comment

0 Comments