ಕಾಸರಗೋಡು : ವಿದ್ಯಾನಗರ ಸಮೀಪ ಪೋಲಿಸ್ ಕಾರ್ಯಾಚರಣೆ ವೇಳೆ 49.15 ಗ್ರಾಂ ಮಾರಕ ಮಾದಕ ವಸ್ತು ಎಂಡಿಎಂಎ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೊಲ್ಲಂಗಾನ ನಿವಾಸಿಯಾದ ಮುಹಮ್ಮದ್ ರಫೀಕ್ (39) ಎಂಬಾತನನ್ನು ಮುಟ್ಟತ್ತೋಡು ಕಲ್ಲಕಟ್ಟ ಎಂಬಲ್ಲಿಂದ ಬಂಧಿಸಲಾಗಿದೆ. ಆರೋಪಿ ಪ್ರಯಾಣಿಸುತ್ತಿದ್ದ ಶಿಫ್ಟ್ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರ ಸೂಚನೆ ಮೇರೆಗೆ ರಚಿಸಲಾದ ವಿಶೇಷ ತಂಡವು ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ. ಎಸ್‌ಐ ಮೌಶಾಬಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

0 Comments