Ticker

6/recent/ticker-posts

Ad Code

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಂಸ್ಮರಣೆ

 

ಕಾಸರಗೋಡು : ಭಾರತೀಯ ಜನ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ನಿಧನರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಪಂಡಿತ್ ದೀನ್ ದಯಾಳ್, ಭಾರತೀಯ ಜನಸಂಘದ (ಬಿಜೆಪಿ) ಪ್ರಮುಖ ನಾಯಕ, ಪ್ರಖ್ಯಾತ ಚಿಂತಕ, ದಾರ್ಶನಿಕ ಮತ್ತು ಏಕಾತ್ಮ ಮಾನವತಾವಾದ ಸಿದ್ಧಾಂತದ ಪ್ರವರ್ತಕರಾಗಿದ್ದು ಇಂದು ಅವರ ಸ್ಮೃತಿದಿನದ ಅಂಗವಾಗಿ  ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಸೂರ್ಲು ಮತ್ತು ರಮೇಶ್ ಕಡಪ್ಪುರಂ ಮಾತನಾಡಿದರು.

Post a Comment

0 Comments