Ticker

6/recent/ticker-posts

Ad Code

ಕೇರಳದಲ್ಲಿ ಏಪ್ರಿಲ್ 9 ರಂದು ವಿಧಾನಸಭೆ ಚುನಾವಣೆಗೆ ದಿನ‌ ನಿಗದಿ

 


ನವದೆಹಲಿ: ಕೇರಳದಲ್ಲಿ ಏಪ್ರಿಲ್ 9 ರಂದು ವಿಧಾನಸಭೆ ಚುನಾವಣೆಗೆ ದಿನ‌ ನಿಗದಿಪಡಿಸಿ ಚುನಾವಣಾ ಆಯೋಗ ಪ್ರಕಟಿಸಿದೆ . ಬಹು ನಿರೀಕ್ಷೆಯಲ್ಲಿದ್ದ ಪಕ್ಷಗಳಿಗೆ ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ಕೇವಲ ಮೂರು ವಾರಗಳು ಮಾತ್ರ ಲಭ್ಯವಾಗಲಿದೆ. ಚುನಾವಣೆ ಕಳೆದ ಬಳಿಕ ದೀರ್ಘ ಒಂದು ತಿಂಗಳ ಸಮೀಪ ಮೇ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.ಚುನಾವಣೆಗೆ ರಾಜ್ಯದ 14 ಜಿಲ್ಲೆಗಳಲ್ಲಿ 30471 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.

ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸಲು 100 ವರ್ಷ ಮೇಲ್ಪಟ್ಟ 1571 ಮತದಾರರಿದ್ದಾರೆ.  ಕೇರಳದ 2.70 ಕೋಟಿ ಮತದಾರರಲ್ಲಿ 4.24 ಲಕ್ಷ ಹೊಸ ಮತದಾರರಿದ್ದಾರೆ.

 ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಚುನಾವಣೆಯೂ ಏಪ್ರಿಲ್ 9 ರಂದು. ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದ್ದು, ಪ್ರಜಾಪ್ರಭುತ್ವದ ಉತ್ಸವದಲ್ಲಿ  ಅರ್ಹತೆ ಹೊಂದಿರುವ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. 

ಚುನಾವಣೆಯನ್ನು ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿನಂತಿಸಿದ್ದಾರೆ.

Post a Comment

0 Comments