Ticker

6/recent/ticker-posts

Ad Code

ಭಾಷಾ ಮಸೂದೆ ವಿರೋಧಿಸಿ ಪೆರ್ಲದಲ್ಲಿ ಮಾ. 25ರಂದು ಹಕ್ಕೊತ್ತಾಯ ಮೆರವಣಿಗೆ


 ಪೆರ್ಲ : ಮಾ.28ರಂದು ಕಾಸರಗೋಡು ತಾಲೂಕು ಆಫೀಸಿನ ಮುಂಭಾಗದಲ್ಲಿ ಕರ್ನಾಟಕ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಹಕ್ಕೊತ್ತಾಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ  ಪೆರ್ಲದಲ್ಲಿ ಮಾ 25ರಂದು ಪ್ರಾದೇಶಿಕವಾಗಿ ಹಕ್ಕೊತ್ತಾಯ ಮೆರವಣಿಗೆ ನಡೆಯಲಿದೆ. ವ್ಯಾಪಾರ ಭವನ ಪರಿಸರದಿಂದ ಹೊರಟು ಹಕ್ಕೊತ್ತಾಯ ಮೆರವಣಿಗೆ ಪೆರ್ಲ ಗಾಂಧಿ ಕಟ್ಟೆಯಲ್ಲಿ ಮುಕ್ತಾಯಗೊಳ್ಳಲಿದೆ. ಇದರ ಪೂರ್ವಭಾವಿಯಾಗಿ ಇಂದು ಪೆರ್ಲ ವ್ಯಾಪಾರ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸೋಮಶೇಖರ್ ಜೆ. ಎಸ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಕ್ಕೊತ್ತಾಯ ಕಾರ್ಯಕ್ರಮದ ಯಶಸ್ಸಿಗಾಗಿ ತಾತ್ಕಾಲಿಕ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಆಯಿಷಾ ಎ.ಎ, ಸಂಚಾಲಕರಾಗಿ ಸುಭಾಷ್ ಪೆರ್ಲ, ಸಹ ಸಂಚಾಲಕರಾಗಿ ಶರತ್ಚಂದ್ರ ಶೆಟ್ಟಿ, ಜಿ. ಕೃಷ್ಣರಾಜ ಗೋಳಿತ್ತಡ್ಕ, ವೇಣುಗೋಪಾಲ. ಎಸ್, ವಿಜಯಕುಮಾರ್, ಕಮಲಾಕ್ಷ ನಲ್ಕ, ಶರತ್ ಕುಮಾರ್ ಎಂ, ಪ್ರಚಾರ ಸಮಿತಿಗೆ ಬಿ.ಪಿ. ಶೇಣಿ, ಅಶ್ರಫ್ ಮರ್ತ್ಯ, ವನಜಾಕ್ಷಿ ಪಿ ಚೆಂಬ್ರಕಾನ ಇವರನ್ನು ಆಯ್ಕೆ ಮಾಡಲಾಯಿತು. 

ಎಣ್ಮಕಜೆ ಗ್ರಾ. ಪಂ. ಸದಸ್ಯರಾದ ಆಯಿಷಾ ಎ.ಎ., ಶರತ್ಚಂದ್ರ ಶೆಟ್ಟಿ, ಬೇ.ಸಿ ಗೋಪಾಲಕೃಷ್ಣ ಭಟ್, ಬಿ.ಪಿ ಶೇಣಿ, ಮಹಮ್ಮದ್ ಆಲಿ ಪೆರ್ಲ, ಉಮೇಶ್ ಕೆ. ಪೆರ್ಲ, ರಿಶಾದ್ ಪಿ.ಯಂ.ಎ, ವಿದ್ಯಾರತ್ನ ಪಿ. ಬಿ,  ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments