Ticker

6/recent/ticker-posts

Ad Code

ಕಾಂಞಂಗಾಡ್, ನೀಲೇಶ್ವರ ಪಯ್ಯನ್ನೂರು ರೈಲು ನಿಲ್ದಾಣಗಳಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ನಿಲುಗಡೆಗೆ ಅನುಮತಿ


ಕಾಞಂಗಾಡ್ : ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಪಯ್ಯನ್ನೂರು, ನೀಲೇಶ್ವರಂ ಮತ್ತು ಕಾಞಂಗಾಡ್ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಕೇಂದ್ರ ಸಚಿವ ಸುರೇಶ್ ಗೋಪಿ, ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ನಿಲುಗಡೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದರು. ಇದರೊಂದಿಗೆ, ಕಣ್ಣೂರು ಮತ್ತು ಕಾಸರಗೋಡು ನಡುವೆ ರೈಲು ನಿಲ್ದಾಣಗಳ ಕೊರತೆಯಿಂದ ಉತ್ತರ ಮಲಬಾರ್‌ನಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆಯನ್ನು ಪರಿಹಾರ ಕಂಡಂತಾಗಿದೆ. 16329 ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರದಂದು ಕಾರ್ಯನಿರ್ವಹಿಸುತ್ತದೆ. ಇದು ನಾಗರಕೋಯಿಲ್ ಜಂಕ್ಷನ್‌ನಿಂದ ಬೆಳಿಗ್ಗೆ 11.40 ಕ್ಕೆ ಹೊರಡಲಿದೆ. 16330 ಮಂಗಳೂರು ಜಂಕ್ಷನ್ - ನಾಗರಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಪ್ರತಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುತ್ತದೆ ಎಂದು ಇಲಾಖಾಧಿಕೃತರು ತಿಳಿಸಿದ್ದಾರೆ.

Post a Comment

0 Comments