Ticker

6/recent/ticker-posts

Ad Code

ಮವ್ವಾರು - ವಡಂಬಳೆ - ಮಂಞನಡ್ಕ ಕಾಂಕ್ರಿಟ್ ರಸ್ತೆಯ ಉದ್ಘಾಟನೆ

ಕುಂಬ್ಡಾಜೆ : ಕಾರಡ್ಕ ಬ್ಲಾಕ್ ಪಂಚಾಯತಿನ 2025-26 ನೇ ಆರ್ಥಿಕ ವರ್ಷದ ಯೋಜನಾ ಮೊತ್ತದಲ್ಲಿ ಕಾಮಗಾರಿ ನಡೆಸಿದ ಮವ್ವಾರು- ವಡಂಬಳೆ - ಮಂಞನಡ್ಕ ರಸ್ತೆಯ ಕಾಂಕ್ರಿಟ್ ಕೆಲಸ ಪೂರ್ಣಗೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮ‌ ಇಂದು ನಡೆಯಿತು. ಕಾರಡ್ಕ‌ಬ್ಲಾಕ್ ಪಂಚಾಯತು ಅಧ್ಯಕ್ಷರಾದ ಬಾಲನ್ ಸಿ ಯವರು ಉದ್ಘಾಟಿಸಿದರು. ಕುಂಬ್ಡಾಜೆ ಗ್ರಾಮ‌ ಪಂಚಾಯತು ಅಧ್ಯಕ್ಷರಾದ ಯಶೋದಾ ಎನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯರಾದ ಸುಧಾಮ‌ ಗೋಸಾಡ, ಗ್ರಾಮ ಪಂಚಾಯತ್ ಸದಸ್ಯರಾದ ಕೊರಗಪ್ಪ ಬೆಳ್ಳಿಗೆ, ಸಾಮಾಜಿಕ ಕಾರ್ಯಕರ್ತ ಶಶಿಧರ ತೆಕ್ಕೇಮೂಲೆ, ಪ್ರಮುಖರಾದ ಜಯಪ್ರಕಾಶ್ ರೈ ಮರತ್ತಿಲ,  ಶಶಿಕಾಂತ ಮವ್ವಾರು, ಉದಯಶಂಕರ ಆಚಾರ್ಯ, ಮೋನಪ್ಪ ಆಳ್ವ, ದಾಮೋದರ ಆಳ್ವ, ನಾರಾಯಣ ಆಳ್ವ, ನಾರಾಯಣ ಆಚಾರ್ಯ, ಬೃಯಾನ್ ಆಂಟನಿ, ಸದಾಶಿವ ಶೆಟ್ಟಿ , ಭಾಸ್ಕರ ರೈ ಮೊದಲಾದವರು ಉಪಸ್ಥಿತರಿದ್ದರು.

 

Post a Comment

0 Comments