Ticker

6/recent/ticker-posts

Ad Code

ಇರಾನ್‌-ಇಸ್ರೇಲ್‌ ಯುದ್ಧದ ಬಗ್ಗೆ ಸುಳ್ಳು ಸುದ್ದಿ, ವೀಡಿಯೋ ಪೋಸ್ಟ್‌ – 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ


 ಅಮೆರಿಕ-ಇಸ್ರೇಲ್‌, ಇರಾನ್‌ ನಡುವಿನ ಯುದ್ಧದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 19 ಭಾರತೀಯರು ಸೇರಿದಂತೆ 35 ಮಂದಿ ಬಂಧನಕ್ಕೆ ಯುಎಇ ಆದೇಶ ಹೊರಡಿಸಿದೆ.‌ ನಡೆಯುತ್ತಿರುವ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ದೃಶ್ಯಾವಳಿಗಳು ಮತ್ತು ನಿರೂಪಣೆಗಳನ್ನು ಪ್ರಸಾರ ಮಾಡಲು ಆರೋಪಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ, ಆರೋಪಿಗಳು ತ್ವರಿತ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ. ಜನರನ್ನು ದಾರಿತಪ್ಪಿಸುವ, ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಿದ ಆರೋಪ ಇವರ ಮೇಲಿದೆ. ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳ ಮೇಲೆ ಮೇಲ್ವಿಚಾರಣೆ ಮಾಡುವ ಮೂಲಕ ಈ ಕ್ರಮಕೈಗೊಳ್ಳಲಾಗಿದೆ ಎಂದು ಯುಎಇಯ ಅಟಾರ್ನಿ ಜನರಲ್ ಡಾ. ಹಮದ್ ಸೈಫ್ ಅಲ್ ಶಮ್ಸ್ ಹೇಳಿದ್ದಾರೆ. 10 ಆರೋಪಿಗಳನ್ನು ಶನಿವಾರ ವಿಚಾರಣೆ ನಡೆಸಿದ ನಂತರ ಸಾರ್ವಜನಿಕ ವಿಚಾರಣೆ ಪ್ರಾರಂಭವಾಯಿತು. ಅವರನ್ನು ಕಸ್ಟಡಿಯಲ್ಲಿಡಲು ಆದೇಶಿಸಲಾಗಿದೆ ಎಂದು ವಾಮ್ ವರದಿ ಮಾಡಿದೆ. ಇವರು ಯುಎಇಯ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳು, ಪ್ರಮುಖ ಕಟ್ಟಡಗಳ ಮೇಲೆ ದಾಳಿಗಳನ್ನು ಸೂಚಿಸುವ ಕೃತಕ ಕೃತಕ ಬುದ್ಧಿಮತ್ತೆ (AI)-ರಚಿತ ದೃಶ್ಯಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಅಟಾರ್ನಿ ಜನರಲ್ ಅಲ್ ಶಮ್ಸ್ ತಿಳಿಸಿದ್ದಾರೆ. ಯುಎಇಯಲ್ಲಿ ಇಂತಹ ಕೃತ್ಯಗಳಿಗೆ ಕಾನೂನಿನಡಿಯಲ್ಲಿ ಕನಿಷ್ಠ 1 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 1,00,000 ದಿರ್ಹಮ್‌ಗಳ (25.19 ಲಕ್ಷ ರೂಪಾಯಿ) ದಂಡ ವಿಧಿಸಲಾಗುವುದು.

Post a Comment

0 Comments