Ticker

6/recent/ticker-posts

Ad Code

ಕೂಡ್ಲು ಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಬಸ್ ಕೀಲಿಕೈ ಹಸ್ತಾಂತರ


ಕಾಸರಗೋಡು : ಕೂಡ್ಲು ಗೋಪಾಲಕೃಷ್ಣ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ  ಬಸ್ ಕೊಡುಗೆಯಾಗಿ ನೀಡಲಾಗಿದೆ. ಈ ಸಂಬಂಧ ಕೀಲಿಕೈ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಶಾಲಾ ಆವರಣದಲ್ಲಿ ನಡೆಯಿತು. ಬ್ಯಾಂಕ್ ಎಜಿಎಂ ವಿಶ್ವನಾಥ ಅವರು ಶಾಲಾ ಪ್ರಬಂಧಕ ಕೆ.ಜಿ.ಶ್ಯಾನುಭೋಗ್ ಅವರಿಗೆ ಕೀಲಿಕೈ ಹಸ್ತಾಂತರಿಸಿದರು. ಬ್ಯಾಂಕ್ ಕಾಸರಗೋಡು ಶಾಖೆಯ ಪ್ರಬಂಧಕ ಹರಿಲಾಲ್, ಶಾಲಾ ಮುಖ್ಯಶಿಕ್ಷಕಿ ಶ್ರೀಜಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಕೂಡ್ಲು, ನಿವೃತ್ತ ಶಿಕ್ಷಕ ನರಸಿಂಹ ಮಯ್ಯ, ಎಸ್.ಎನ್.ಶ್ಯಾನುಭೋಗ್ ಮೊದಲಾದವರು ಭಾಗವಹಿಸಿದ್ದರು.

Post a Comment

0 Comments