Ticker

6/recent/ticker-posts

Ad Code

ಗ್ಯಾಸ್ ಸಿಲಿಂಡರ್ ಕೊರತೆ : ರೈಲುಗಳಲ್ಲಿ ಬಿಸಿಯೂಟ ಸ್ಥಗಿತ


ನವದೆಹಲಿ: ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್‌ಗಳ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಈ ಸ್ಥಿತಿ ಉಂಟಾಗಿದ್ದು, ಇದರ ಪರಿಣಾಮ IRCT ಸೇವೆಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ರೈಲುಗಳಲ್ಲಿ ಬಿಸಿ ಅಡುಗೆ ನೀಡುವ ವ್ಯವಸ್ಥೆಯನ್ನು ಕೆಲಕಾಲ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ತಾಜಾ ಊಟ ನೀಡಲು ಅಸಾಧ್ಯವಾದರೆ, ಮುಂಚಿತವಾಗಿ ಆಹಾರಕ್ಕಾಗಿ ಹಣ ಕಟ್ಟಿದವರಿಗೆ ಅದನ್ನು ಹಿಂತಿರುಗಿಸುವ ಆಯ್ಕೆಯನ್ನೂ ರೈಲ್ವೆ ಇಲಾಖೆ ಪರಿಶೀಲಿಸುತ್ತಿದೆ. ಅಡುಗೆ ಕೇಂದ್ರಗಳಾದ ‘ಬೇಸ್ ಕಿಚನ್’ಗಳಲ್ಲಿ ಗ್ಯಾಸ್ ಲಭ್ಯವಿಲ್ಲದ ಕಾರಣ ಆಹಾರ ಸಿದ್ಧಪಡಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ.

Post a Comment

0 Comments