ನೀರ್ಚಾಲು: ನಿವೃತ್ತ ಪೊಲೀಸ್ ಅಧಿಕಾರಿ, ಬೇಳ ನಿವಾಸಿ ಪ್ರಭಾಕರ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದಿದ್ದ ಅವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಶಾಂತಕುಮಾರಿ, ಮಕ್ಕಳಾದ ವಿನೋದ್ ರಾಜ್, ಶ್ವೇತಪ್ರಭ, ವಿವೇಕ್ ರಾಜ್, ಅಳಿಯ ಪ್ರದೀಪ್ (ಎ.ಎಸ್.ಐ.ಕುಂಬಳೆ), ಸೊಸೆಯಂದಿರಾದ ರಮ್ಯ, ಅಕ್ಷತಾ, ಸಹೋದರ ಸಹೋದರಿಯರಾದ ಜಯಕರ, ಸುಭಾಷ್, ನಾರಾಯಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಅವರು ಬದಿಯಡ್ಕ, ಆದೂರು, ಮಂಜೇಶ್ವರ, ಕುಂಬಳೆ, ಕಾಸರಗೋಡು ಟೌನ್ ಸಹಿತ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು

0 Comments