Ticker

6/recent/ticker-posts

Ad Code

ಶಿಕ್ಷಕ ಡಾ.ಸತೀಶ ಪುಣಿಂಚಿತ್ತಾಯ ನಿವೃತ್ತಿ ಪ್ರಯುಕ್ತ ನಾಳೆ ಇಡಿಯಡ್ಕ ಕ್ಷೇತ್ರದಲ್ಲಿ ಗುರು ವಂದನೆ - ಯಕ್ಷಗಾನ ಬಯಲಾಟ


ಪೆರ್ಲ : ಸಂಘಟಕ, ಭಾಗವತ, ಶಿಕ್ಷಕ ಡಾ.ಸತೀಶ ಪುಣಿಂಚಿತ್ತಾಯ ಅವರು ಈ ವರ್ಷ  ಅಧ್ಯಾಪಕ ವೃತ್ತಿಯಿಂದ ನಿವೃತ್ತನಾಗುತ್ತಿರುವ ಹಿನ್ನೆಲೆಯಲ್ಲಿ ಮಾ. 14ಕ್ಕೆ  ಶನಿವಾರ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ  ದೇವಸ್ಥಾನದ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಂಗವಾಗಿ ನಾಳೆ  (ಶನಿವಾರ) ಬೆಳಗ್ಗೆ 11 ರಿಂದ ಯಕ್ಷಗಾನ ವೈಭವ, ಮಧ್ಯಾಹ್ನ 12.45ರಿಂದ ಭೋಜನ, ಅಪರಾಹ್ನ ಗಂಟೆ 2 ರಿಂದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ  ಭಾರತೀ ಶ್ರೀ ಪಾದಂಗಳವರು  ಶ್ರೀಮದೆಡನೀರು ಮಠ ಹಾಗೂ ಯೋಗಿಕೌಸ್ತುಭ, ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಧಾಮ-ಮಾಣಿಲ ಇವರ ಸಮಕ್ಷಮದಲ್ಲಿ ಗುರುವಂದನೆ, ಹಲವು ಸಾಧಕರಿಗೆ ಗೌರವಾರ್ಪಣೆ. ಸಂಜೆ 3ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಬೇಡರ ಕಣ್ಣಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
 

Post a Comment

0 Comments