Ticker

6/recent/ticker-posts

Ad Code

ಸಮವಸ್ತ್ರದೊಳಗಿರುವ ಸಮಾನ ಮನಸ್ಸು ಹಾಗೂ ಒಗ್ಗಟ್ಟಿನ ದುಡಿಮೆ ನಾಡಿನ ಅಭಿವೃದ್ಧಿಗೆ ದ್ಯೋತಕವಾಗಿರಲಿ : ಬ್ಲೋಕ್ ಪಂ.ಸದಸ್ಯ ಮಹೇಶ್ ವಳಕುಂಜ

ಮಾನ್ಯ : ಯುವಕರ ಸೃಜನಾತ್ಮಕತೆ ಹಾಗೂ ಉತ್ಸಾಹವು ನಾಡಿನ ಅಭಿವೃದ್ಧಿಗೆ ಅತಿ ಅಗತ್ಯ ಈ ನಿಟ್ಟಿನಲ್ಲಿ ಚುಕ್ಕಿನಡ್ಕದ ಷಣ್ಮುಖ ಕ್ಲಬ್ಬಿನ ಸದಸ್ಯರ ಸಮವಸ್ತ್ರದೊಳಗಿರುವ ಸಮಾನ ಮನಸ್ಸು ಹಾಗೂ ಒಗ್ಗಟ್ಟಿನ ದುಡಿಮೆ ನಾಡಿನ ಅಭಿವೃದ್ಧಿಗೆ ದ್ಯೋತಕವಾಗಿರಲಿ ಎಂದು ಬ್ಲಾಕ್ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ನುಡಿದರು. ಕ್ಲಬ್ಬಿನ ನೂತನ ವರ್ಷದ ಸಮವಸ್ತ್ರವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಕಳೆದ 16 ವರ್ಷಗಳಿಂದ ಚುಕ್ಕಿನಡ್ಕ ಪರಿಸರದಲ್ಲಿ ಸಾಮಾಜಿಕ ಕಳಕಳಿಯಿಂದ ಕಾರ್ಯಾಚರಿಸುತ್ತಿರುವ ಷಣ್ಮುಖ ಕ್ಲಬ್ ಮುಂದೆಯೂ ಕೂಡ ಉತ್ತಮ ಕೆಲಸಗಳಿಂದ ಸಮಾಜಕ್ಕೆ ಮಾದರಿಯ ಸಂಘಟನೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮವನ್ನು ಚುಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರದ ಪ್ರಧಾನ ಗುರುಸ್ವಾಮಿಗಳಾದ ಕುಂಞಿಕಣ್ಣ ಗುರುಸ್ವಾಮಿಯವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಗುರುಸ್ವಾಮಿ ಮಧುಸೂದನ ಚುಕ್ಕಿನಡ್ಕ ಶುಭ ಹಾರೈಸಿದರು. ಕ್ಲಬ್ಬಿನ ಅಧ್ಯಕ್ಷರಾದ ಉದಯ ಚುಕ್ಕಿನಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಬ್ರಹ್ಮಣ್ಯ ಸಿ ಎಚ್ ಸ್ವಾಗತಿಸಿ, ರಂಜಿತ್ ಚುಕ್ಕಿನಡ್ಕ ವಂದಿಸಿದರು. ಕ್ಲಬ್ಬಿನ ಕಾರ್ಯದರ್ಶಿ ವಿನೀತ್ ಸಿ ಎಚ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

Post a Comment

0 Comments