Ticker

6/recent/ticker-posts

Ad Code

ಬದಿಯಡ್ಕ ಜೆಸಿಐಯಿಂದ ಮಹಿಳಾ ದಿನಾಚರಣೆ


ಬದಿಯಡ್ಕ : ಜೆಸಿಐ  ಬದಿಯಡ್ಕ ಘಟಕವು ಜೀನಿಯಸ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿತು. ಕಾಲೇಜು ಉಪ ಪ್ರಾಂಶುಪಾಲೆ ಜಯಲಕ್ಷ್ಮಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ್ ಪಿವಿಟಿ, ರಾಜ್ ನೀಲಾಂಬರಿ ಶುಭಹಾರೈಸಿ, ಜೆಸಿ ದಿವ್ಯಾ ಉಪನ್ಯಾಸ ನೀಡಿದರು. 2024-25ನೇ ವರ್ಷದ ಪಿಪಿಟಿಟಿಸಿ ಬ್ಯಾಚ್‌ನ ಅತ್ಯಂತ ಹೆಚ್ಚು ಅಂಕ ಪಡೆದ ಯಿಷತ್ ಝಾಕಿಯಾರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೋನಿಷಾ ಸ್ವಾಗತಿಸಿ, ಝೈನಭ ನಿಶಾ ವಂದಿಸಿದರು. ಕೃಷ್ಣ ಪ್ರಿಯ ನಿರೂಪಿಸಿದರು.

Post a Comment

0 Comments