Ticker

6/recent/ticker-posts

Ad Code

ಬೆದ್ರಂಪಳ್ಳದಲ್ಲಿ ಮಾರ್ಚ್ 6ಕ್ಕೆ ಶ್ರೀ ಗೆಜ್ಜೆಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ

ಪೆರ್ಲ : ಮಾ.6ರಂದು  ರಾತ್ರಿ 7.30ಕ್ಕೆ ಬೆದ್ರಂಪಳ್ಳದಲ್ಲಿ  ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳದವರಿಂದ  ಯಕ್ಷಗಾನ ಬಯಲಾಟ ನಡೆಯಲಿದೆ.  'ಯಕ್ಷಾಭಿಮಾನಿ ಬಳಗ ಬೆದ್ರಂಪಳ್ಳ' ಆಯೋಜನೆಯಲ್ಲಿ 'ಶ್ರೀ ದೇವಿ ಮಹಾತ್ಮೆ' ಎಂಬ ಕಥಾ ಭಾಗವನ್ನು  ಶ್ರೀ ಗೆಜ್ಜೆಗಿರಿ ಮೇಳದವರು ಆಡಿ ತೋರಿಸಲಿದ್ದಾರೆ.  

ಹಿಮ್ಮೇಳದಲ್ಲಿ ಭಾಗವತರಾಗಿ ಯಕ್ಷನಿಧಿ ಯೋಗೀಶ್ ಶರ್ಮ ಆಳದಂಗಡಿ, ಶಶಾಂಕ್ ಎಲಿಮಲೆ, ಚೆಂಡೆ-ಮದ್ದಳೆಗಳಲ್ಲಿ ಅಡೂರು ಹರೀಶ್ ರಾವ್, ಬಾಲಸುಬ್ರಹ್ಮಣ್ಯ ಭಟ್, ನೇರೋಳು ಗಣಪತಿ ಭಟ್, ಶ್ರೀಶ ಭಟ್ ಪೊಳಲಿ, ಚಕ್ರತಾಳದಲ್ಲಿ ವಸಂತ ವಾಮಪದವು ಸಹಕರಿಸಲಿದ್ದಾರೆ. ಹಾಸ್ಯದಲ್ಲಿ ಯಕ್ಷಬೊಳ್ಳಿ ಕಡಬ ದಿನೇಶ್ ರೈ, ಅಂಕತಡ್ಕ ರಘುನಾಥ ರೈ, ಸ್ತ್ರೀಪಾತ್ರದಲ್ಲಿ ಕೆದಿಲ ಜಯರಾಮ್ ಭಟ್, ಬೋಳಂತೂರು ಜಗದೀಶ್ ಗೌಡ, ನಿಶಾಂತ್ ಪೂಜಾರಿ ಮುಚ್ಚೂರು, ಅಭಿಜಿತ್ ಜೈನ್ ಕುತ್ಲೂರು ಹಾಗೂ ಸರ್ವಶ್ರೀಗಳಾದ ಕೊಳ್ತಿಗೆ ನಾರಾಯಣ ಗೌಡ, ಉದಯ ಅಡ್ಯನಡ್ಕ, ನಾಗಪ್ಪ ಪಡುಮಲೆ, ವಿಶ್ವನಾಥ ಕುಲಾಲ್ ಪದ್ಮುಂಜ, ಶೇಖರ ಜಯನಗರ, ಪ್ರವೀಣ್ ಕುಲಾಲ್ ಆರ್ಲಪದವು, ದತ್ತೇಶ್ ಮಾವಿನಕಟ್ಟೆ, ವಿನೋದ್ ರೈ ಸೊರಕೆ, ದಾಮೋದರ ಪಾಟಾಳಿ ಶರವು, ಹರೀಶ್ ಕುಲಾಲ್ ವೇಣೂರು, ರಾಜೇಶ್ ಶೆಟ್ಟಿ ಕುಂಪಲ, ಸುರೇಶ್ ಬಾಯಾರು, ಲಕ್ಷ್ಮಣ ಗೌಡ ಮುಚ್ಚೂರು, ಯತಿನ್ ಕಂಟ್ರೆಮಾಜಲ್ ಮುಮ್ಮೇಳದಲ್ಲಿ ಸಹಕರಿಸಲಿರುವರು. ಕಲಾಭಿಮಾನಿಗಳೆಲ್ಲರೂ ಹೆಚ್ಚಿನ  ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

Post a Comment

0 Comments