ನೆಲಮಂಗಲ : ಕೆನಡಾ ದೇಶದಲ್ಲಿ ಕನ್ನಡಿಗನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿಯ ಭಾವಚಿತ್ರವನ್ನು ಕೆನಡಾದ ಟೊರಂಟೊ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಕೊಲೆಯಾಗಿದ್ದರು. ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿಕೊಂಡು ಅಲ್ಲಿನ ಕನ್ನಡಿಗರ ಸಂಘಟನೆಯ ಮೂಲಕ ಸಾಕಷ್ಟು ಹೆಸರು ಸಂಪಾದನೆ ಮಾಡಿಕೊಂಡಿದ್ದ ಚಂದನ್ ಮೇಲೆ ಕಳೆದ ತಿಂಗಳು ಕೆನಡಾದ ಟೊರಂಟೊ ನಗರದಲ್ಲಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದ. ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ವಿಚಾರದಲ್ಲಿ ಟೊರಂಟೊ ಪೊಲೀಸರು ಪ್ರೆಸ್ ಮೀಟ್ ಮಾಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿಯ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ. ಆರೋಪಿಯನ್ನು ಇಷಯಾ ಥಾಮಸ್ ಬಡ್ಗೇರ್(19) ಎಂಬುದಾಗಿ ಗುರುತಿಸಿದ್ದು ಆತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

0 Comments