ಪೆರ್ಲ : ಇತಿಹಾಸ ಪ್ರಸಿದ್ಧ ಯೆಣ್ಮಕಜೆ ತರವಾಡಿನಲ್ಲಿ ವರ್ಷಾವಧಿ ಪಿಲಿಚಾಮುಂಡಿ ದೈವನೇಮೋತ್ಸವ ಮಾ.4ಕ್ಕೆ ಜರಗಲಿದೆ. ಇದರ ಅಂಗವಾಗಿ ಸೋಮವಾರ ಬೆಳಗ್ಗೆ ಪ್ರತಿಷ್ಠಾ ದಿನಾಚರಣೆ ನಡೆಯಿತು. ಮಂಗಳವಾರ ಸಾಯಂ. ಗಂಟೆ 7ರಿಂದ ಶ್ರೀ ಗಣೇಶ ಭಜನಾ ಮಂಡಳಿ, ಬೆದ್ರಂಪಳ್ಳ ಇವರಿಂದ ಭಜನೆ, ರಾತ್ರಿ ಗಂಟೆ 9ರಿಂದ ಹರಿಸೇವೆ, ಮಾ.4ಕ್ಕೆ ಮಧ್ಯಾಹ್ನ ಗಂಟೆ 12ಗಂಟೆಗೆ ಪಿಲಿಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ, ರಾತ್ರಿ ಸತ್ಯದೇವತೆ, ಕೊರತಿ, ಗುಳಿಗ ನೇಮ, ಮಾ. 5ಕ್ಕೆ ಬೆಳಗ್ಗೆ ಗಂಟೆ 7ರಿಂದ ರಕ್ತೇಶ್ವರೀ ದೈವದ ನೇಮ ಕಾರ್ಯಕ್ರಮದಂಗವಾಗಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರೆ ಅನ್ನದಾನ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

0 Comments