Ticker

6/recent/ticker-posts

Ad Code

ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡಿಯನ್ ಐಎಎಸ್ ಅಧಿಕಾರ ಸ್ವೀಕಾರ

ಕಾಸರಗೋಡು : ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡಿಯನ್ ಐಎಎಸ್ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಬೆಳಿಗ್ಗೆ 10 ಗಂಟೆಗೆ ಸಿವಿಲ್ ಠಾಣೆಗೆ ತಲುಪಿ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಪಶೇಖರ್ ಅವರಿಂದ ಅಧಿಕಾರ ವಹಿಸಿಕೊಂಡರು. 

ಅರ್ಜುನ್ ಪಾಂಡಿಯನ್ ತ್ರಿಶೂರ್ ಜಿಲ್ಲಾ ಕಲೆಕ್ಟರ್ ಆಗಿದ್ದರು. ಅವರು ಮುಖ್ಯ ಕಾರ್ಯದರ್ಶಿಗಳ ಸ್ಟಾಫ್ ಆಫೀಸರ್  ಮತ್ತು ಕಾರ್ಮಿಕ ಆಯುಕ್ತ ಹುದ್ದೆಗಳನ್ನು ಅಲಂಕರಿಸಿದ್ದಾರೆ. 2017 ರ ಬ್ಯಾಚ್ ಕೇರಳ ಕೇಡರ್ ಐಎಎಸ್ ಅಧಿಕಾರಿಯಾದ ಅರ್ಜುನ್ ಪಾಂಡಿಯನ್, ಕಣ್ಣೂರು ಸಹಾಯಕ ಅಧಿಕಾರಿಯಾಗಿಯೂ  ಒಟ್ಟಪಾಲಂ, ಮಾನಂತವಾಡಿ ಸಬ್ ಕಲೆಕ್ಟರ್ , ಅಟ್ಟಪ್ಪಾಡಿ ನೋಡಲ್ ಅಧಿಕಾರಿ, ಇಡುಕ್ಕಿ ಅಭಿವೃದ್ಧಿ ಆಯುಕ್ತ, ಶಬರಿಮಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಂದಾಯ ಇಲಾಖೆಯ ಜಂಟಿ ಆಯುಕ್ತ, ರಾಜ್ಯ ಭೂ ಮಂಡಳಿಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಸೇವಾ ನಿರ್ದೇಶಕ, ವಸತಿ ಮಂಡಳಿಯ ಕಾರ್ಯದರ್ಶಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮುಂತಾದ ಹುದ್ದೆಗಳನ್ನು ಅಲಂಕರಿಸಿದ್ದರು. 

ಕಾಸರಗೋಡಿನ ಇಪ್ಪತ್ತೈದನೇ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡಿಯನ್ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿಯನ್ನು ಪಡೆದಿರುವ ಅರ್ಜುನ್, ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ತ್ರಿಶೂರ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ತ್ರಿಶೂರ್‌  ಅಭಿವೃದ್ಧಿಯ ಹೊಸ ಮಾದರಿಗಳನ್ನು ಕಾಸರಗೋಡಿಗೆ ಪರಿಚಯಿಸಲು  ಅರ್ಜುನ್ ಪಾಂಡಿಯನ್ ಇದೀಗ ಕಾಸರಗೋಡು ಜಿಲ್ಲೆಗೆ ಕಾಲಿರಿಸಿದ್ದಾರೆ.   ಅವರು ಪಾಂಡಿಯನ್ ಮತ್ತು ಉಷಾಕುಮಾರಿ ದಂಪತಿಯ ಪುತ್ರ,  ಡಾ. ಅನು ಇವರ ಪತ್ನಿಯಾಗಿದ್ದಾರೆ.

ಚಿತ್ರ ಮತ್ತು ವರದಿ : ಶ್ರೀಕಾಂತ್ ಕಾಸರಗೋಡು

Post a Comment

0 Comments