Ticker

6/recent/ticker-posts

Ad Code

ಸಿಲಿಂಡರ್ ಸ್ಫೋಟ : ಹೊತ್ತಿ ಉರಿದ ಹೋಟೆಲ್; ಬಾಲಕನಿಗೆ ಗಂಭೀರ ಗಾಯ

ಬಳ್ಳಾರಿ : ಹೋಟೆಲ್‌ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ  ಪರಿಣಾಮ ಹೋಟೆಲೊಂದು ಹೊತ್ತಿ ಉರಿದ ಘಟನೆ ಬಳ್ಳಾರಿ  ಜಿಲ್ಲೆಯ ಸಿರಗುಪ್ಪ  ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.

ತೆಕ್ಕಲಕೋಟೆಯ ಈರಣ್ಣ ಎನ್ನುವವರ ಹೋಟೆಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಹೋಟೆಲ್‌ನಲ್ಲಿ 9 ಜನ ಈರಣ್ಣನ ಕುಟುಂಬಸ್ಥರು ಮಲಗಿದ್ದು, ಅವರಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಶ್ರೀನಿವಾಸ್‌ (10) ಗಂಭೀರವಾಗಿ  ಗಾಯಗೊಂಡ ಬಾಲಕ. ಆತನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಉಳಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಹೋಟೆಲ್‌ನ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದ್ದು, ಜೀವನೋಪಾಯಕ್ಕೆ ಇದ್ದ ಹೊಟೇಲ್‌ಗೆ ಬೆಂಕಿ ಬಿದ್ದಿದ್ದರಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಸಿಲಿಂಡರ್ ಸ್ಫೋಟಗೊಂಡ  ಹೋಟೆಲ್‌ನ ಅಕ್ಕಪಕ್ಕದ  ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ, ಟೈಯರ್ ಅಂಗಡಿಯೊಂದು  ಹೊತ್ತಿ ಉರಿದಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments