Ticker

6/recent/ticker-posts

Ad Code

ವಿಶ್ವ ಆರೋಹ ಚಾರಿಟೇಬಲ್ ಸೊಸೈಟಿಯಿಂದ ಮಂಜೇಶ್ವರದಲ್ಲಿ ಉಚಿತ ಶೈಕ್ಷಣಿಕ ಮತ್ತು ಔದ್ಯೋಗಿಕ ಕಾರ್ಯಾಗಾರ.

 

ಮಂಜೇಶ್ವರ : ವಿಶ್ವಕರ್ಮ ಸಮಾಜದಿಂದ ಶೈಕ್ಷಣಿಕ ಸಹಕಾರ ಆರ್ಥಿಕ ನೆರವು ಮತ್ತು ಔದ್ಯೋಗಿಕ ಮಾರ್ಗದರ್ಶನ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಧ್ಯೇಯವಾಗಿಸಿದ ವಿಶ್ವ ಆರೋಹ ಚಾರಿಟೇಬಲ್ ಸೊಸೈಟಿಯ ನೇತೃತ್ವದಲ್ಲಿ ಉಚಿತ ಏಕದಿನ ಶೈಕ್ಷಣಿಕ ಮತ್ತು ಔದ್ಯೋಗಿಕ ಕಾರ್ಯಾಗಾರ ಬಂಗ್ರ ಮಂಜೇಶ್ವರದ ಶ್ರೀ ಕಾಳಿಕಾ ಪರಮೇಶ್ವರಿ ಸಭಾಭವನದಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಎಂ. ಮೋಹನ ಆಚಾರ್ಯ ಕೋಟೆಕ್ಕಾರು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮವನ್ನು ನವದೆಹಲಿಯ ಡಾ. ನಿರ್ಮಲ್ ಜಿತ್ ಸಿಂಗ್ ಕಲ್ಸಿ ಆನ್ಲೈನ್ ಮೂಲಕ ಉದ್ಘಾಟಿಸಿದರು. ಕಾಯಕ್ರಮದಲ್ಲಿ ಬಂಗ್ರ ಮಂಜೇಶ್ವರದ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದ ಅರ್ಚಕ ಪ್ರಕಾಶ್ ಚಂದ್ರ ದೀಪ ಬೆಳಗಿಸಿದರು. ಡಾ. ಬಾಲಕೃಷ್ಣ ಬಿ.ಎಂ ಹೊಸಂಗಡಿ,ಬಂಗ್ರ ಮಂಜೇಶ್ವರದ ಶ್ರೀ ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ ಎಂ ಯದುನಂದನ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಪ್ರಿಯಾ ನಾಗರಾಜ ಆಚಾರ್ಯ, ಓಜ ಸಾಹಿತ್ಯ ಕೂಟದ ಅಧ್ಯಕ್ಷ ಬಿ ಎಂ ಮೋಹನ ಚಂದ್ರ ಆಚಾರ್ಯ, ವಿಶ್ವಕರ್ಮ ಸಮಾಜ ವಿದ್ಯಾ ವರ್ಧಕ  ಸಂಘದ ಅಧ್ಯಕ್ಷ ಎ ಗಂಗಾಧರ ಆಚಾರ್ಯ, ವಿಶ್ವ ಕಲಾಮೃತದ ಅಧ್ಯಕ್ಷ ಸದಾಶಿವ ಪುತ್ತೂರು, ವಿಶ್ವಕರ್ಮ ಸಾಹಿತ್ಯ ದರ್ಶನದ ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು. 

ಬಳಿಕ 8ನೇ ತರಗತಿಯಿಂದ ಪಿ ಎಚ್ ಡಿ ವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಕೌಶಲ್ಯ ಹಾಗೂ ವೃತ್ತಿ ಮಾರ್ಗದರ್ಶನದ ತರಬೇತಿಗಳನ್ನು ನೀಡಲಾಯಿತು. ಸದ್ಯೋಜಾತ ಆಚಾರ್ಯ ಕೊಲ್ಯ ಯೋಗ ಶಿಕ್ಷಣದ ಬಗ್ಗೆ, ಡಾ. ಅನಂತ ಪದ್ಮನಾಭ ಆಚಾರ್ಯ ಉದ್ಯೋಗಾವಕಾಶಗಳ ಬಗ್ಗೆ, ರಾಜಶೇಖರ ಎನ್ ಐ ಪಿ ಎಸ್ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಬಗ್ಗೆ, ಕುಪ್ಪಂ ಯೂನಿವರ್ಸಿಟಿಯ ಡಾ. ಕೆ ಶ್ಯಾಮಲಾ ಸಂಶೋಧನೆಯ ಅವಕಾಶಗಳ ಬಗ್ಗೆ, ಡಾ. ಗುರುರಾಜ ಪಿ ಸೈಬರ್ ಭದ್ರತೆಯ ಬಗ್ಗೆ ತರಗತಿ ನಡೆಸಿದರು. 

ಬಳಿಕ ಶಿಕ್ಷಣ  ಮತ್ತು   ಉದ್ಯೋಗಕ್ಕೆ ಸಂಬಂಧಪಟ್ಟಂತೆ ಹಾರ್ದಿಕ, ಆಪ್ತ ಸಲಹೆ, ಅರೋಗ್ಯ ವಿಮೆ, ಗುಂಪು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ  ಮನುಪ್ರಸಾದ್ ಕನೀರ್  ತೋಟ ಅವರು  ಯತೀಶ್ ಕೊಯಂಬತೂರು, ಅನಿಲ್ ಆಚಾರ್ಯ  ಅವರ ಮಾರ್ಗದರ್ಶನದಲ್ಲಿ ತಯಾರಿಸಿದ  ದತ್ತಾಂಶ  ಸಮೀಕ್ಷೆ ತಂಡ  ಸಂಗ್ರಹಿಸಿದ ವಿದ್ಯಾರ್ಥಿ ಡೇಟಾಬೇಸ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಲಾಯಿತು. ಮೇಘಶ್ರೀ ಆಚಾರ್ಯ ಮತ್ತು ಶಿಕ್ಷಕರ ಬಳಗ ಪ್ರಾರ್ಥನೆಗೈದರು. ಗಣೇಶ್ ಆಚಾರ್ಯ ಜಾಲ್ಸೂರ್, ಪವಿತ್ರ ಮಿಥುನ್ ಆಚಾರ್ಯ ಪುತ್ತೂರು ನಿರೂಪಿಸಿದರು. ಯೋಗೇಂದ್ರ ಆಚಾರ್ಯ ವಂದಿಸಿದರು.

Post a Comment

0 Comments