Ticker

6/recent/ticker-posts

Ad Code

ಕಾಸರಗೋಡು ಜಿಲ್ಲೆಯ ಐದು ಕಡೆಗಳಲ್ಲಿ ವಿಜಿಲೆನ್ಸ್ ದಾಳಿ : ಪರವಾನಗಿ ರಹಿತ ಗಣಿಗಾರಿಕೆ ಪತ್ತೆ

ಕಾಸರಗೋಡು : 'ಆಪರೇಷನ್ ಅರ್ಥ್ ಗಾರ್ಡ್' ನ ಅಂಗವಾಗಿ ಜಿಲ್ಲೆಯ ಐದು ಸ್ಥಳಗಳಲ್ಲಿ ವಿಜಿಲೆನ್ಸ್ ತಪಾಸಣೆ ನಡೆಯಿತು. ಮಣ್ಣು ಉತ್ಖನನ ಮತ್ತು ತೆಗೆಯುವಿಕೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆ, ಅಕ್ರಮಗಳು ಮತ್ತು ಭ್ರಷ್ಟಾಚಾರದ ದೂರುಗಳ ಆಧಾರದ ಮೇಲೆ ರಾಜ್ಯಾದ್ಯಂತ ಪರಿಶೀಲನೆಯ ಭಾಗವಾಗಿ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಾಯಿತು. 

ವಿಜಿಲೆನ್ಸ್ ತಂಡವು ಜಿಲ್ಲಾ ಭೂವಿಜ್ಞಾನ ಕಚೇರಿ, ಕುಂಬಳೆ, ಮಡಿಕೈ, ಕಯ್ಯೂರು-ಚೀಮೇನಿ ಮತ್ತು ಚೆರುವತ್ತೂರು ಗ್ರಾಮ ಪಂಚಾಯಿತಿಗಳನ್ನು ಪರಿಶೀಲಿಸಿತು. ವಿವಿಧ ಸ್ಥಳಗಳಲ್ಲಿ ನೀಡಲಾದ ಪರವಾನಗಿಗಿಂತ ಹೆಚ್ಚಿನ ಮಣ್ಣನ್ನು ಅಗೆದು ತೆಗೆಯಲಾಗಿದೆ ಮತ್ತು ಅಭಿವೃದ್ಧಿ ಪರವಾನಗಿಗಳನ್ನು ನೀಡಿದ ಸ್ಥಳಗಳಲ್ಲಿ ಇನ್ನೂ ಯಾವುದೇ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿಲ್ಲ ಎಂದು ತಪಾಸಣೆಯಲ್ಲಿ ಕಂಡುಬಂದಿದೆ. ದಾಖಲೆಯುಕ್ತ ಪರವಾನಗಿ ಇಲ್ಲದೆ ಮಣ್ಣು ಅಗೆಯುತ್ತಿರುವ ಪ್ರದೇಶಗಳನ್ನು ವಿಜಿಲೆನ್ಸ್ ಪತ್ತೆ ಮಾಡಿದೆ.

Post a Comment

0 Comments