Ticker

6/recent/ticker-posts

Ad Code

ಮುಳ್ಳೇರಿಯ ಲಯನ್ಸ್ ಕ್ಲಬ್ ನಿಂದ ಕುಟುಂಬ ಸಂಗಮ

 

ಮುಳ್ಳೇರಿಯ : ಲಯನ್ಸ್ ಕ್ಲಬ್ ಮುಳ್ಳೇರಿಯ 2025-26ನೇ ಸಾಲಿನ ಕುಟುಂಬ ಸಂಗಮವನ್ನು ಆಯೋಜಿಸಿತ್ತು. ಮುಳ್ಳೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ರವಿ ಗುಪ್ತಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷೆ ಕೆ ರಾಜಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಫಿ ಚೂರಿಪಳ್ಳ ವರದಿ ಮಂಡಿಸಿದರು. 

ಜಿಲ್ಲಾ ಕಾರ್ಯಕಾರಿ ಕಾರ್ಯದರ್ಶಿ ರೀಜಾ ಗುಪ್ತಾ, ಜಿಲ್ಲಾ ಕಾರ್ಯದರ್ಶಿ ವಿ ವೇಣುಗೋಪಾಲ್, ಪ್ರದೇಶ ಅಧ್ಯಕ್ಷ ನಾಸರ್ ಕೊಲವಾಯಲ್, ವಲಯ ಅಧ್ಯಕ್ಷ ಜೋಮಿಚ್ಚನ್ ಮ್ಯಾಥ್ಯೂ, ಮಾಜಿ ಅಧ್ಯಕ್ಷ ಕೆ ಶೇಖರನ್ ನಾಯರ್, ಉಪಾಧ್ಯಕ್ಷ ಟಿ ಎನ್ ಮೋಹನ್ ಮತ್ತು ಖಜಾಂಚಿ ವಿನೋದ್ ಕುಮಾರ್ ಮೇಳತ್ ಮಾತನಾಡಿದರು.

Post a Comment

0 Comments