ಕೊಲ್ಲಂ : ಮಲೆಯಾಳ ಚಲನಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಇ ಎ ರಾಜೇಂದ್ರನ್ (71) ನಿಧನರಾದರು. ಅವರು ಅಲ್ಪ ಸಮಯದಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೊಲ್ಲಂನ ಪಟ್ಟತ್ತಾನಂ ನಿವಾಸಿಯಾದ ಅವರು ಸುಮಾರು ಎಪ್ಪತ್ತು ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸಿದ್ಧ ಚಲನಚಿತ್ರ ನಟ ಮುಖೇಶ್ ಅವರ ಸಹೋದರಿ ಸಂಧ್ಯಾ ಇವರ ಪತ್ನಿಯಾಗಿದ್ದಾರೆ. ಚಲನಚಿತ್ರಗಳು ಮತ್ತು ನಾಟಕಗಳ ಜೊತೆಗೆ, ಧಾರಾವಾಹಿಗಳಲ್ಲೂ ಜನಪ್ರಿಯ ನಟರಾಗಿದ್ದರು. ಇವರು ದೆಹಲಿಯ ನಾಟಕ ಶಾಲೆ ಮತ್ತು ಪುಣೆ ಚಲನಚಿತ್ರ ಸಂಸ್ಥೆಯಲ್ಲಿ ವ್ಯಾಸಂಗಮಾಡಿ ಚಲನಚಿತ್ರ ರಂಗಕ್ಕೆ ಪಾದಾರ್ಪಣೆಗೈದಿದ್ದರು.

0 Comments