Ticker

6/recent/ticker-posts

Ad Code

ಪೆರಡಾಲದಲ್ಲಿ ಶ್ರೀ ಉದನೇಶ್ವರ, ಸಪರಿವಾರ ದೇವತಾ ಪ್ರತಿಷ್ಠೆ ಸಂಪನ್ನ : ಏ.26ಕ್ಕೆ ಬ್ರಹ್ಮಕಲಶಾಭಿಷೇಕ

 

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ 7ನೇ ದಿನ ಗುರುವಾರ ಪ್ರಾತಃಕಾಲ 7.40ರಿಂದ 9.30ರಿಂದ ಮಧ್ಯದ ವೃಷಭ ಲಗ್ನದಲ್ಲಿ ಶ್ರೀ ಉದನೇಶ್ವರ ದೇವರು, ಕುಟ್ಟಿಚ್ಚಾತ ಸಹಿತ ಪರಿವಾರ ದೇವತಾ ಪ್ರತಿಷ್ಠೆ ಜರಗಿತು.

ಪರಮಪೂಜ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯವನ್ನು ವಹಿಸಿದ್ದರು.

ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ವಿಧಾನದಲ್ಲಿ ಶ್ರೀ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ ನಡೆಯಿತು. ಪ್ರಾತಃಕಾಲ 108 ತೆಂಗಿನಕಾಯಿ ಮಹಾಗಣಪತಿ ಹೋಮ ನಡೆಯಿತು. 

ಏ.26ರಂದು ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.

Post a Comment

0 Comments