ಕುಂಬಳೆ : ವ್ಯಕ್ತಿಯೋರ್ವರು ತಮ್ಮ ಪತ್ನಿಯ ಮನೆಯ ಬಾವಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಹೊಸಂಗಡಿ ಜೋಗಿಬೆಟ್ಟುವಿನ ಜೆ. ಶಿವಪ್ಪ (58) ಎಂದು ಗುರುತಿಸಲಾಗಿದೆ.
ಸೀತಾಂಗೋಳಿ ಸಮೀಪದ ಚೋಡಲದಲ್ಲಿರುವ ಪತ್ನಿಯ ಮನೆಯ ಬಳಿ ಪ್ರಕರಣ ನಡೆದಿದ್ದು, ಅವರ ಪತ್ನಿ ಮಂಜುಳಾ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ನಂತರ, ಅವರು ತಮ್ಮ ಮಕ್ಕಳಾದ ಶರಣ್ಯ ಮತ್ತು ಸೌಜನ್ಯ ಅವರೊಂದಿಗೆ ಪತ್ನಿಯ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕುಂಬಳೆ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.

0 Comments