Ticker

6/recent/ticker-posts

Ad Code

ಎ.28ಕ್ಕೆ ಮಂಜೇಶ್ವರದಲ್ಲಿ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಮತ್ತು ಮಹಾಶ್ವೇತಾದೇವಿ ಕಥಾ ಪ್ರಶಸ್ತಿ ಪ್ರದಾನ

ಮಂಜೇಶ್ವರ : ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಮತ್ತು ಮಹಾಶ್ವೇತಾದೇವಿ ಕಥಾ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿ ಏಪ್ರಿಲ್ 28 ರಂದು  ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಜರಗಲಿದೆ.  ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿ ನಡೆಯಲಿದೆ.  

ಡಾ. ಟಿ. ಗೋವಿಂದರಾಜು ಅವರ 'ಕೃಷ್ಣಯ್ಯನ ಕೊಳಲು' ಕಾದಂಬರಿಗೆ 2025ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಮತ್ತು ಮಹಾಶ್ವೇತಾದೇವಿ ಜನ್ಮಶತಮಾನೋತ್ಸವ ಕಥಾ ಪ್ರಶಸ್ತಿ  ಲಿಂಗರಾಜ ಸೊಟ್ಟಪ್ಪನವರ ಅವರ 'ಕೆಂಪು ನದಿ' ಕಥಾಸಂಕಲನಕ್ಕೆ ದೊರಕಿದೆ. ಖ್ಯಾತ ಸಾಹಿತಿ ಡಾ. ನಾ. ಮೊಗಸಾಲೆಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ದಿನ ಹಿರಿಯ ಲೇಖಕಿ ಡಾ. ಮಹೇಶ್ವರಿ ಯು. ಅವರ ಅಧ್ಯಕ್ಷತೆಯಲ್ಲಿ ಸುನಂದಾ ಬೆಳಗಾಂವಕರ ಮತ್ತು ಮಹಾಶ್ವೇತಾದೇವಿಯವರ ಸಾಹಿತ್ಯವನ್ನು ಕುರಿತ ವಿಚಾರಗೋಷ್ಠಿ ನಡೆಯಲಿದೆ. ಪ್ರೊ. ಶಿವಶಂಕರ ಪಿ, ಡಾ. ಸುಭಾಷ್ ಪಟ್ಟಾಜೆ, ವಿಕಾಸ ಹೊಸಮನಿ, ಡಾ. ರತ್ನಾಕರ ಕುನಗೋಡು,  ರೇಷ್ಮಾ ಭಟ್,  ಸೌಮ್ಯ ಪ್ರವೀಣ್, ಕಲ್ಲಚ್ಚು ಮಹೇಶ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

Post a Comment

0 Comments