Ticker

6/recent/ticker-posts

Ad Code

ಗಡಿನಾಡಿನ ಗ್ರಾಮಗಳನ್ನು ಬಡಿದೆಬ್ಬಿಸುತ್ತಿರುವ ಮಂಜೇಶ್ವರದ ಎ.ಕೆ.ಎಂ. ಅಶ್ರಫ್ ಚುನಾವಣಾ ಪ್ರಚಾರ

 

ಮಂಜೇಶ್ವರ : ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ತುಳುನಾಡಿನ ಜನರ ಹೃದಯ ಗೆಲ್ಲುವ ಮೂಲಕ ತಮ್ಮ ಪರ್ಯಟನೆಯನ್ನು ಮುಂದುವರೆಸಿದ್ದಾರೆ. ನಿನ್ನೆ (ಮಂಗಳವಾರ) ಅವರು ವರ್ಕಾಡಿ, ಮಂಜೇಶ್ವರ ಪಂಚಾಯತ್‌ನಲ್ಲಿ ಮತಯಾಚಿಸಿದರು. ಬೆಳಿಗ್ಗೆ ಸೂಪಿಗುರಿಯಿಂದ ಪ್ರಾರಂಭಿಸಿ, ಅವರು ಪಾತೂರು ಅಂಚೆ ಕಚೇರಿ, ಪಾವೂರು ಕೋಡಿ, ಕೆದುಂಬಾಡಿ, ತೌಡುಗೋಳಿ , ನೆತ್ತಿವು, ಕೆದಕ್ಕಾರ್, ಬೋರ್ಕಳ, ಆನೆಕಲ್ಲು, ಗುವೆದಪಡ್ಪು, ಕಜೆ, ಪಾವೂರು, ಬಾಕ್ರಬೈಲು, ಬದಿಯಾರು ಮತ್ತು ಬೇಕರಿ ಜಂಕ್ಷನ್‌ನಲ್ಲಿ ಸಂಚರಿಸಿ ಮೊರತ್ತಣೆಲ್ಲಿ ಸಮಾಪ್ತಿಗೊಳಿಸಿದರು.

ಮಧ್ಯಾಹ್ನದ ನಂತರ ಮಂಜೇಶ್ವರ ಪಂಚಾಯತ್‌ನ ಕಡಂಬಾರ್ ಶಾಲಾ ಜಂಕ್ಷನ್‌ನಿಂದ ಆರಂಭವಾದ ಪರ್ಯಟನೆಯು ಪಾಪ್ಪಿಲ, ಮಚ್ಚಂಪಾಡಿ, ಗೇರುಕಟ್ಟೆ, ರಾಗಂ ಜಂಕ್ಷನ್, ಪೊಸೋಟ್ ಜಂಕ್ಷನ್, ಹೊಸಂಡಿ ಟೌನ್, ಬಂಗ್ರ ಮಂಜೇಶ್ವರ, ಹೊಸಬೆಟ್ಟು, ಕಡಪ್ಪುರ, ಬ್ಲಾಕ್ ಆಫೀಸ್ ಹತ್ತಿರ, ಉದ್ಯಾವರ ಜಂಕ್ಷನ್, ತೂಮಿನಾಡ್, ಮರಿಯಾಶ್ರಮ ಚರ್ಚ್ ಮತ್ತು ಕುಂಜತ್ತೂರು ಜಂಕ್ಷನ್ ನಲ್ಲಿ ಕೊನೆಗೊಂಡಿತು.

ಯು.ಡಿ.ಎಫ್ ಮಂಡಲದ ಅಧ್ಯಕ್ಷ ಅಝೀಝ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ.ಮೂಸಾ, ಎ.ಕೆ.ಆರಿಫ್, ಜೆ.ಎಸ್.ಸೋಮಶೇಖರ್, ಲಕ್ಷ್ಮಣ ಪ್ರಭು, ಹರ್ಷಾದ್ ವರ್ಕಾಡಿ, ಅಜೀಜ್ ಕಳತ್ತೂರು, ಪಿ.ಬಿ.ಅಬೂಬಕರ್, ಯು.ಕೆ.ಸೈಫುಲ್ಲಾ ತಂಗಳ್, ಮುಹಮ್ಮದ್ ತಂಗಳ್, ಮಜೀದ್ ಪಚ್ಚಂಬಳ, ಸಿದ್ದೀಕ್ ದಂಡೆಗೋಳಿ, ಉಮ್ಮರ್ ಬೋರ್ಕಳ, ಸಿದ್ದೀಕ್ ಹಾಜಿ, ಅಬ್ದುಲ್ ಹಮೀದ್ ಮಚ್ಚಂಬಾಡಿ, ಪಿ.ಬಿ ಅಬ್ದುಲ್ ಮಜೀದ್, ಹಾರಿಸ್ ಪಾವೂರು, ಅನ್ಸಾರ್ ವರ್ಕಾಡಿ ಅಝೀಝ್ ಹಾಜಿ, ಹನೀಫ್, ಬಶೀರ್ ಕನಿಲ, ಮುಮ್ತಾಝ್ ಮೀರ, ಇರ್ಫಾನಾ ಇಕ್ಬಾಲ್, ಮುಹಮ್ಮದ್ ಪಾವೂರು ಮೊದಲಾದವರು ವಿವಿಧೆಡೆಗಳಲ್ಲಿ ಮಾತನಾಡಿದರು.

Post a Comment

0 Comments