ಪೆರ್ಲ : ಸತ್ಯಸಾಯಿ ಸಮಿತಿ ವತಿಯಿಂದ ಪೆರ್ಲದ ಗುಲಾಬಿ ನಿವಾಸದಲ್ಲಿ ಆರಾಧನಾ ದಿನದ ಅಂಗವಾಗಿ ರುದ್ರಮಂತ್ರಪಠಣ, ಭಗವದ್ಗೀತಾ ಪಠಣ, ಸಾಯಿ ಭಜನೆ, ಅರ್ಹ ಫಲಾನುಭವಿಗಳಿಗೆ ಜಿಲ್ಲಾ ಸತ್ಯಸಾಯಿ ಸಮಿತಿ ಕಳುಹಿಸಿ ಕೊಟ್ಟ ಕಿಟ್ಟುಗಳ ವಿತರಣೆ, ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ನೆನಪಿನ ಕಾಣಿಕೆಗಳನ್ನು ಹಂಚುವಿಕೆ, ನಾರಾಯಣ ಸೇವೆಯೊಂದಿಗೆ ಆಚರಿಸಲಾಯಿತು. ಹಿರಿಯ ಸದಸ್ಯರಾದ ಶ್ರೀ ಗೋಪಾಲಕೃಷ್ಣ ಭಟ್ಟರು ದಿನದ ಮಹತ್ತ್ವವನ್ನು ಸಾಯಿ ಪವಾಡದ ಕತೆಯೊಂದಿಗೆ ಪ್ರಸ್ತುತಪಡಿಸಿದರು. ಏಪ್ರಿಲ್ 6 ರಿಂದ ಏಪ್ರಿಲ್ 24 ರವರೆಗೆ ಮಕ್ಕಳಿಗೆ ಕು. ಅಂಜಲಿ ನಡೆಸಿಕೊಟ್ಟ ಬೇಸಿಗೆ ಶಿಬಿರವನ್ನು ನೆನಪಿನ ಕಾಣಿಕೆ ಕೊಡುವುದರ ಮೂಲಕ ಸಮಾಪ್ತಿಗೊಂಡಿತು.

0 Comments