Ticker

6/recent/ticker-posts

Ad Code

ಸ್ವರ್ಗ ಸಂಗಮ - ಶತಮಾನೋತ್ಸವ ಸಮಿತಿ ರೂಪೀಕರಣ

ಪೆರ್ಲ : ಇಲ್ಲಿನ ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ 'ಸ್ವರ್ಗ ಸಂಗಮ' ಪೂರ್ವ ವಿದ್ಯಾರ್ಥಿಗಳ, ವಿದ್ಯಾಭಿಮಾನಿಗಳ ಮಹಾಸಭೆ ಸಾಹಿತಿ, ನಿವೃತ್ತ ಮುಖ್ಯಶಿಕ್ಷಕ ವಾಸುದೇವ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯನ್ನು ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಶ್ರೀಪಡ್ರೆ ದೇಲಂತಾರು, ಕಾರ್ಯಾಧ್ಯಕ್ಷರಾಗಿ ಕೆ.ವೈ ಸುಬ್ರಹ್ಮಣ್ಯ ಭಟ್ ಕೆದಂಬಾಯಿಮೂಲೆ, ಕಾರ್ಯದರ್ಶಿಯಾಗಿ ವೆಂಕಟ ವಿದ್ಯಾಸಾಗರ್, ಕೋಶಾಧಿಕಾರಿಯಾಗಿ ಹೃಷಿಕೇಶ್ ವಿ.ಎಸ್, ಗೌರವ ಸಲಹೆಗಾರರಾಗಿ ವಾಸುದೇವ ಭಟ್, ರಾಮಯ್ಯ  ರೈ, ಹಾಗೂ ಕಾರ್ಯಕಾರಿ ಸಮಿತಿಗೆ ಹಲವರನ್ನು ಆಯ್ಕೆ ಮಾಡಲಾಯಿತು. 

ಶಾಲಾ ಅಭಿವೃದ್ಧಿಗಾಗಿ  ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಶಿಕ್ಷಕಿ ಗೀತಾಕುಮಾರಿ.ಬಿ ಸ್ವಾಗತಿಸಿ, ಶಿಕ್ಷಕ ಪದ್ಮನಾಭ ಆರ್ ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ವಿದ್ಯಾಭಿಮಾನಿಗಳು, ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments