Ticker

6/recent/ticker-posts

Ad Code

ಮೇ 25ಕ್ಕೆ ಮುಳ್ಳೇರಿಯದಲ್ಲಿ ಜಗನ್ಮಾತಾ ಹಾಸ್ಪಿಟಲ್ ಲೋಕಾರ್ಪಣೆ


ಮುಳ್ಳೇರಿಯ : ಪೇಟೆಯ ಹೃದಯ ಭಾಗದಲ್ಲಿ ಈಹಿಂದೆ ಕಾರ್ಯಾಚರಿಸುತ್ತಿದ್ದ ಕೃಷ್ಣ ಕ್ಲಿನಿಕ್ ಮತ್ತು ಹೆರಿಗೆ ಆಸ್ಪತ್ರೆಯು ವೈ ಯು ಜೆ  ಹೆಲ್ತ್ ಕೇರ್ ಎಲ್ ಎಲ್ ಪಿ  ಇದರ ಅಂಗಸಂಸ್ಥೆಯಾಗಿ ಬದಲಾವಣೆಗೊಂಡು ಜಗನ್ಮಾತಾ ಹಾಸ್ಪಿಟಲ್ ಎಂಬ ಹೆಸರಿನೊಂದಿಗೆ ಜನರ ಸೇವೆಗೆ ಸಿದ್ಧವಾಗಿದೆ. ಮೇ 25 ಸೋಮವಾರದಂದು ಬೆಳಿಗ್ಗೆ 10 ಗಂಟೆಗೆ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ, ಶ್ರೀ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಮತ್ತು ಶುಭಾಶೀರ್ವಾದಗಳೊಂದಿಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಮುಖ್ಯಸ್ಥ , ಖ್ಯಾತ ಎಲುಬು ತಜ್ಞ  ಡಾ. ಎಮ್. ಶಾಂತಾರಾಮ ಶೆಟ್ಟಿ ಉದ್ಘಾಟಿಸುವರು. ಕಾರಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ  ಜನನಿ ಎಂ. ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್  ಒ.ಪಿ. ವಿಭಾಗ ಉದ್ಘಾಟಿಸುವರು. ತುರ್ತುಚಿಕಿತ್ಸಾ ವಿಭಾಗವನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು, ದಕ್ಷಿಣ ಕನ್ನಡ , ಲೇಬರ್ ರೂಮ್ ಅನ್ನು ಕಾಸರಗೋಡು ವಿಧಾನಸಭಾ ಕ್ಷೇತ್ರ ಶಾಸಕ ಕಲ್ಲಟ್ರ ಮಾಹಿನ್ ಹಾಜಿ , ಲಾಬೋರೇಟರಿಯನ್ನು ಉದುಮ ವಿಧಾನಸಭಾ ಕ್ಷೇತ್ರ ಶಾಸಕ ಕೆ. ನೀಲಕಂಠನ್ , ಆಡಳಿತ ಕಚೇರಿಯನ್ನು ಕ್ಯಾಂಪ್ಕೊ ಅಧ್ಯಕ್ಷ  ಎಸ್. ಆರ್. ಸತೀಶ್ಚಂದ್ರ, ಎಕ್ಸರೇ ವಿಭಾಗವನ್ನು ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹೈ ಡಿಪೆಂಡೆನ್ಸಿ ಘಟಕವನ್ನು ರವೀಶ ತಂತ್ರಿ ಕುಂಟಾರು ಉದ್ಘಾಟಿಸಲಿರುವರು. ಕಾರಡ್ಕ ಬೋಕ್ ಪಂಚಾಯತು ಅಧ್ಯಕ್ಷ ಸಿ. ಬಾಲನ್ , ಕಾರಡ್ಕ ಗ್ರಾಮ ಪಂಚಾಯತು ಸದಸ್ಯೆ ವಸಂತಿ, ಕೆ.ವಿ.ವಿ.ಇ.ಎಸ್. ಮುಳ್ಳೇರಿಯ ಘಟಕ  ಅಧ್ಯಕ್ಷ ಗಣೇಶ ವತ್ಸ ಮೊದಲಾದವರು ಅತಿಥಿಗಳಾಗಿರುವರು.

Post a Comment

0 Comments