Ticker

6/recent/ticker-posts

Ad Code

ಅನಾವರಣ ವಾರ್ಷಿಕ - ಸಾಹಿತ್ಯ ನಚ್ಚಣ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

  

ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ವೇದಿಕೆಯ ವಾರ್ಷಿಕ ಕಾರ್ಯಕ್ರಮ 'ಸಾಹಿತ್ಯ ನಚ್ಚಣ'  ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಪಾದಿತ ಕೃತಿ 'ಬೆಳಕು ಗೆದ್ದ ಕಥೆಗಳು',  ಪರಿಮಳ ಮಹೇಶ್ ಅವರ 'ಕರಿಕೋಟಿನ ಬಿಳಿ ಸತ್ಯಗಳು', ಅಶ್ವಿಜ ಶ್ರೀಧ‌ರ್ ಅವರ 'ಚೀರುದಾರ' ಕೃತಿಗಳು ಲೋಕಾರ್ಪಣೆಗೊಂಡವು.  

ಪ್ರಸಿದ್ಧ ಸಾಹಿತಿಗಳು, ಉಪನ್ಯಾಸಕರಾದ ರಘು ಇಡ್ಕಿದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲರು, ಅನಾವರಣ ವೇದಿಕೆಯ ಅಧ್ಯಕ್ಷೆ ಪರಿಮಳ ಮಹೇಶ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಂಘಟನಾ ಕಾರ್ಯದರ್ಶಿ ಸಚಿನ್ ಎಸ್ ಎ ಶ್ರವಣಬೆಳಗೊಳ, ಸಹನಾ ಪ್ರಕಾಶನ ಬೆಂಗಳೂರು ಇದರ ಪ್ರಕಾಶಕರಾದ ಶ್ರೀನಿವಾಸ್, ಸುನೀಲ್ ಹಳೆಯೂರು ಅತಿಥಿಗಳಾಗಿದ್ದರು. 

ಸಂದರ್ಭದಲ್ಲಿ ಆಶು ಹಾಸ್ಯ ಕವನ ಸ್ಪರ್ಧಾಗೋಷ್ಠಿ ನಡೆಡಿದ್ದು, ಹರೀಶ್ ಜಿ ನಾಯಕ್ ಮೀಯಪದವು ಪ್ರಥಮ, ಸೌಮ್ಯಾ ರ್ ಶೆಟ್ಟಿ ದ್ವಿತೀಯ, ತೃತೀಯ ಸುಮತಿ ಪಿ ಕಾರ್ಕಳ, ನಳಿನಿ ಭಾಸ್ಕರ್ ರೈ ಮೆಚ್ಚುಗೆ ಬಹುಮಾನವನ್ನು ಪಡೆದುಕೊಂಡರು. ಶ್ಯಾಂಪ್ರಸಾದ್ ಭಟ್ ತೀರ್ಪುಗಾರರಾಗಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಗಾಯತ್ರಿ ಪಳ್ಳತ್ತಡ್ಕ ಪ್ರಥಮ, ರೇವತಿ ಪದ್ಮರಾಜ್ ಜೈನ್ ಹಾಡವಳ್ಳಿ ದ್ವಿತೀಯ, ಶಾಲಿನಿ ಕೆಮ್ಮಣ್ಣು, ಕೊಳಚಪ್ಪೆ ಗೋವಿಂದ ಭಟ್ ತೃತೀಯ, ಚೈತನ್ಯ ಕರ್ಕೇರ ಪಡುಬಿದ್ರಿ, ಅಚಲ ಬಿ ಹೆನ್ಲಿ, ಕುಮಾರ ಚಲವಾದಿ, ವಿನುತಾ ಹಂಚಿನಮನಿ, ಪ್ರದಿಪ್ ಬೇಲೂರು, ಸಾಕ್ಷಿ ತಿಕೋಟಿಕರ, ಹರೀಶ್ ಕುಮಾರ್ ಮೆಲ್ಕಾರ್, ವಿಮಲಾರುಣ ಪಡ್ಡಂಬೈಲು, ಸುಮತಿ ಪಿ ಕಾರ್ಕಳ, ಶ್ಯಾಮ್ ಪ್ರಸಾದ್ ಭಟ್ ಮೆಚ್ಚುಗೆ ಬಹುಮಾನ ಪಡೆದಿದ್ದು, ಸಾಹಿತ್ಯ ನಚ್ಚಣದಲ್ಲಿ ಬಹುಮಾನ ವಿತರಿಸಲಾಯಿತು. ಅನಾವರಣದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ಸಾಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ದಕ್ಷಯಜ್ಞ ನೃತ್ಯ ರೂಪಕ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Post a Comment

0 Comments