ಪೆರ್ಲ : ನಲ್ಕ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯ ವತಿಯಿಂದ ವಾಚನ ಕಳರಿ ಕಾರ್ಯಕ್ರಮದ ಅಂಗವಾಗಿ ಉದ್ಯಮಿ ಅಬ್ದುಲ್ಲ ಮಾದುಮೂಲೆ ಅವರ ಶುದ್ಧ ನೀರು ತಯಾರಿಸುವ ಘಟಕಕ್ಕೆ ಭೇಟಿ ನೀಡಿದ ಶಿಬಿರಾರ್ಥಿಗಳಾದ ಮಕ್ಕಳಿಗೆ ಅಲ್ಲಿನ ಯಂತ್ರದ ವಿವರಣೆ, ಕೃಷಿ, ನೀರು ಸಂಗ್ರಹ ವಿಧಾನ, ದನ ಸಾಕುವ ಡೈರಿ, ಉದ್ಯೋಗ, ಶಿಕ್ಷಣ ಕುರಿತು ಮಾಹಿತಿ ಪಡೆಯಲಾಯಿತು. ಉದ್ಯಮಿ ಅಬ್ದುಲ್ಲ ಮಾದುಮೂಲೆಯವರು ಸ್ವತಃ ತಮ್ಮ ಜೀವನಾನುಭವದ ಕಥನಗಳನ್ನು ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ತಿಳಿಸಿದರು. ಗ್ರಂಥಾಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

0 Comments