Ticker

6/recent/ticker-posts

Ad Code

ಮೇ 24ಕ್ಕೆ ಕೋಡಿಬೈಲ್ ಶಾಲೆಯಲ್ಲಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ

 

ಉಪ್ಪಳ : ವಿಶ್ವ ಹಿಂದೂ ಪರಿಷತ್ ಉಪಖಂಡ ಸಮಿತಿ ಕೋಡಿಬೈಲ್ ಹಾಗೂ  ಓಂ ಶಕ್ತಿ ಫ್ರೆಂಡ್ಸ್ ಕೋಡಿಬೈಲ್ ಆಶ್ರಯದಲ್ಲಿ ಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕಿವಿಯ ಶ್ರವಣ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಮೇ 24ರಂದು ಬೆಳಗ್ಗೆ 9.30ಕ್ಕೆ ಕೋಡಿಬೈಲ್ ನವೋದಯ ಎಎಲ್ ಪಿ ಶಾಲೆಯಲ್ಲಿ ನಡೆಯಲಿದೆ. ಟೀಮ್ ಈಶ್ವರ್ ಮಲ್ಪೆ ಶ್ರವಣ ಯಂತ್ರದ ಶೇ.40 ಮೊತ್ತ ಪಾವತಿಸಲಿದೆ.  ನೋಂದಣಿ ಕಡ್ಡಾಯವಾಗಿದ್ದು ಮೊದಲು ನೋಂದಾಯಿಸುವ 30 ಮಂದಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ 8951804399 ಸಂಪರ್ಕಿಸಬಹುದು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಹೊಂದಿದ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುವುದು‌. ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ ತರಬೇಕು. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

Post a Comment

0 Comments