ಬೆಳ್ಳೂರು : ಬೆಳ್ಳೂರು ಬಂಟ ಮಹಿಳಾ ಸಂಘದ 20ನೇ ವಾರ್ಷಿಕೋತ್ಸವದ ಪ್ರಯುಕ್ತ 15ನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಪ್ರಥಮ ಸ್ಥಾನವನ್ನು ಕುಂಬಳೆ ಕಂಚಿಕಟ್ಟೆಯ ಪುಣ್ಯವತಿ ರೈಯವರು ಗಳಿಸಿದ್ದಾರೆ. ಸುಳ್ಯದ ಅಮರಪಡ್ನೂರು ಕಾವ್ಯಶ್ರೀ ಅಶ್ವಿನಿ ರೈಯವರು ಬರೆದ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಇಚ್ಲಂಪಾಡಿ ಕಾರಿಂಜೆಯ ವಿನೋದ ಪ್ರಸಾದ್ ರೈ ಹಾಗೂ ಸುಳ್ಯದ ಸುರಕ್ಷಾ ಶಬರಿಶ್ ರೈಯವರ ಪ್ರಬಂಧಕ್ಕೆ ತೃತೀಯ ಸ್ಥಾನ ಲಭಿಸಿದೆ ಎಂದು ಬೆಳ್ಳೂರು ಬಂಟ ಮಹಿಳಾ ಸಂಘದ ಪ್ರಕಟಣೆ ತಿಳಿಸಿದೆ.

0 Comments