Ticker

6/recent/ticker-posts

Ad Code

ಪೆರಡಾಲದಲ್ಲಿ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವಸಂತ ವೇದ ಶಿಬಿರ ಸಮಾರೋಪ

 

ಬದಿಯಡ್ಕ : ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ನೇತೃತ್ವದಲ್ಲಿ ಕಳೆದ ಅನೇಕ ವರ್ಷಗಳಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆದು ಬರುತ್ತಿರುವ ವಸಂತ ವೇದಪಾಠ ಶಾಲೆಯ ಈ ವರ್ಷದ ಸಮಾರೋಪ ಸಮಾರಂಭ ಜರಗಿತು. ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಅಧ್ಯಕ್ಷ ವೈ.ಕೆ.ಗೋವಿಂದ ಭಟ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಹೊಸ ಪೀಳಿಗೆಗೆ ಸನಾತನ ಧರ್ಮದ ಸಂಸ್ಕಾರ, ವೇದಮಂತ್ರಗಳ ಉಚ್ಚಾರಣೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಧಾರೆ ಎರೆಯುವ ಉದ್ದೇಶದಿಂದ ಅನಾದಿ ಕಾಲದಿಂದ ನಡೆದುಬರುತ್ತಿರುವ ಈ ಶಿಬಿರವು ನಿರಂತರವಾಗಿ ಮುಂದುವರಿಯಬೇಕು. ಇದಕ್ಕಾಗಿ ಸಮಾಜದ ಸರ್ವರ ಸಹಕಾರ ಅತೀ ಅಗತ್ಯ. ವೇದಗಳು ಕೇವಲ ಮಂತ್ರಗಳಲ್ಲ, ಅವು ನಮ್ಮ ಬದುಕಿನ ದಾರಿದೀಪ. ಇಂದಿನ ಧಾವಂತದ ಯುಗದಲ್ಲಿ ಮಕ್ಕಳಿಗೆ ಇಂತಹ ಸಂಸ್ಕಾರ ನೀಡುವುದು ಅತ್ಯಂತ ಅಗತ್ಯವಾಗಿದೆ"  ಎಂದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತ ಫ್ರಮ್ ಹೋಮ್ ಸಂಸ್ಥೆಯ ಪ್ರಾಧ್ಯಾಪಕ ವಿನಾಯಕ ರಜತ ಭಟ್ಟ ಮಡಿಪ್ಪು ಮಾತನಾಡಿ ನಿತ್ಯ ತನ್ನ ದಿವ್ಯ ತೇಜಸ್ಸಿನ ಮೂಲಕ ಸಕಲ ಜೀವಜಾಲಗಳಿಗೆ ಬೆಳಕನ್ನು ನೀಡುವ ಸೂರ್ಯದೇವನ ನಿತ್ಯ ಆರಾಧನೆಯ ಮೂಲಕ ನಾವು ಜೀವನದಲ್ಲಿ ಬೆಳಗಲು ಸಾಧ್ಯವಿದೆ. ನಿತ್ಯ ನಿರಂತರ ಗಾಯತ್ರೀ ಮಂತ್ರೋಚ್ಛಾರಣೆಯಿಂದ  ಮಾನವ ಜನ್ಮದಲ್ಲಿ ಸಾರ್ಥಕತೆಯನ್ನು ಪಡೆಯೋಣ ಎಂದರು. ನಿವೃತ್ತ ಅಧ್ಯಾಪಕ ಶ್ಯಾಮಪ್ರಸಾದ ಕುಳಮರ್ವ ಮಾತನಾಡಿ ಆದುನಿಕತೆಯೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಭರದಲ್ಲಿ ಅನಾದಿ ಕಾಲದಿಂದ ಬಂದ ಸಂಪ್ರದಾಯಗಳನ್ನು ಬಿಟ್ಟುಕೊಡಬಾರದು. ನಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು  ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದರು. ವೇದ ಗುರುಗಳಾದ ವೆಂಕಟೇಶ್ವರ ಭಟ್ ಪಟ್ಟಾಜೆ, ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ಶುಭಹಾರೈಸಿದರು. ವೇದಮೂರ್ತಿ ಶಿವರಾಮ ಭಟ್ಟ ಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೇದಗುರುಗಳಾದ ಮುರಳೀಧರ ಶರ್ಮ ಅಳಕ್ಕೆ ವರದಿ ಮಂಡಿಸಿದರು. ಮುರಳೀಧರ ಶರ್ಮ ಅಳಕ್ಕೆ, ಜಯಂತ ಕೋಡಿಯಡ್ಕ ಉಪಸ್ಥಿತರಿದ್ದರು. ಡಾ| ನಾರಾಯಣ ಪ್ರದೀಪ ಪೆರ್ಮುಖ ವಂದಿಸಿದರು. ವಿದ್ಯಾರ್ಥಿಗಳು ತಾವು ಕಲಿತ ಸಂಧ್ಯಾವಂದನೆ, ಸೂಕ್ತಗಳು, ರುದ್ರ, ಚಮೆ, ವಿಷ್ಣುಸಹಸ್ರನಾಮಗಳನ್ನು ಅತ್ಯಂತ ಸ್ಪಷ್ಟ ಉಚ್ಚಾರಣೆಯೊಂದಿಗೆ ಕಂಠಪಾಠ ಒಪ್ಪಿಸಿ ನೆರೆದಿದ್ದ ವೇದಾಭಿಮಾನಿಗಳ ಹಾಗೂ ಪೋಷಕರ ಮನಗೆದ್ದರು.

Post a Comment

0 Comments