Ticker

6/recent/ticker-posts

Ad Code

ಕೊಲ್ಲಂಗಾನ ಅನಂತಶ್ರೀಯಲ್ಲಿ ಬಹುಭಾಷಾ ಕವಿಗಳು ಮೇಳೈಸಿದ ಕವಿಗೋಷ್ಠಿ

 

ಕಾಸರಗೋಡು : ಪ್ರೊ. ಶ್ರೀನಾಥ ಕಾಸರಗೋಡು ಇವರ  ಗೃಹಪ್ರವೇಶದ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಕೊಲ್ಲಂಗಾನ ಅನಂತಶ್ರೀಯಲ್ಲಿ ಬಹುಭಾಷಾ ಕವಿಗೋಷ್ಠಿ ಜರಗಿತು. ಲೇಖಕಿ ಅಶ್ವಿನಿ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದು, ಹಿರಿಯ ಪತ್ರಕರ್ತ, ಸಾಹಿತಿಗಳಾದ ಮಲಾರ್ ಜಯರಾಮ ರೈ  ಉದ್ಘಾಟಿಸಿದರು. ಹಿರಿಯ ಕವಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ವೆಂಕಟ ಭಟ್ ಎಡನೀರು, ಪ್ರೇಮಚಂದ್ರನ್ ಚೋಂಬಾಲ, ಬಾಲಕೃಷ್ಣ ಬೇರಿಕೆ,  ಸುಂದರ ಬಾರಡ್ಕ, ಕೆ.ವಿ. ಕುಮಾರನ್,  ಪ್ರಸನ್ನಕುಮಾರಿ ಮರ್ದಂಬೈಲು, ವನಜಾಕ್ಷಿ ಪಿ ಚೆಂಬ್ರಕಾನ, ಕರುಣಾಕರನ್ ಅದ್ರುಗುಳಿ, ಮತ್ತು ರವಿ ನಾಯ್ಕಾಪು  ಕವಿಗೋಷ್ಠಿಯಲ್ಲಿ ಭಾಗವಹಿಸಿದರು. ಅಖಿಲೇಶ್ ನಗುಮುಗಂ ಸ್ವಾಗತಿಸಿ, ಪ್ರೊ. ಶ್ರೀನಾಥ್ ಎ. ವಂದಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ನೀರ್ಚಾಲು ನಿರೂಪಿಸಿದರು. 

ಬಳಿಕ ಭಜನಾ ಕಾರ್ಯಕ್ರಮ ರಾತ್ರಿ ಮಹಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ನಂತರ ಸಾಂಸ್ಕೃತಿಕ ಸಮ್ಮಿಲನ, ಸಮಾರೋಪ ಕಾರ್ಯಕ್ರಮ ಜರಗಿತು.

Post a Comment

0 Comments