ನೀರ್ಚಾಲು : ಕನ್ಯಪ್ಪಾಡಿ ಸಮೀಪದ ಸ್ವಾಮಿಕೃಪಾ (ಚೋಯಿಮೂಲೆ) ಎಂಬಲ್ಲಿ 600 ವರ್ಷ ಇತಿಹಾಸವಿರುವ ಕೊಡ್ಯಮ್ಮೆ ಅಂತಲ ಶ್ರೀ ಧರ್ಮಚಾವಡಿಯ ಶ್ರೀ ದೈವಗಳ ನೇಮೋತ್ಸವವು ಮೇ 2ನೇ ರಿಂದ 5ನೇ ತಾರೀಕಿನವರೆಗೆ ಬಹು ವಿಜೃಂಭಣೆಯಿಂದ ಜರಗಲಿರುವುದು.
ಕಾರ್ಯಕ್ರಮದಂಗವಾಗಿ ಮೇ 2ಕ್ಕೆ ಬೆಳಗ್ಗೆ ಸ್ಥಳಶುದ್ಧಿ, ರಾತ್ರಿ ಆಂಜನೇಯ ಸೇವೆ, ಭದ್ರಕಾಳಿಗೆ ಮಹಾಪೂಜೆ, ತರ್ಪಣಾ ಪ್ರಸಾದ ವಿತರಣೆ, ಮೇ 3ಕ್ಕೆ ಬೆಳಗ್ಗೆ 7.30 ರಿಂದ ಬೆಮ್ಮರಿಗೆ ಹಾಲಿಕ್ಕುವುದು, ನಂತರ ಗುಳಿಗಕೋಲ, ಅನ್ನಸಂತರ್ಪಣೆ, ಮಧ್ಯಾಹ್ನ 1.30ಕ್ಕೆ ಮೂಲ ಮೈಸಂದಾಯ ದೈವದ ನೇಮ, ಪ್ರಸಾದ ವಿತರಣೆ, ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ, ರಾತ್ರಿಗಂಟೆ 8.30ರಿಂದ ಪಂಜುರ್ಲಿ, ಕಲ್ಲುರ್ಟಿ, ಕೊರಗತನಿಯ ದೈವದ ಕೋಲ ಜರಗಲಿದೆ. ಮೇ 4ಕ್ಕೆ ಪ್ರಾತಃಕಾಲ ಶ್ರೀ ದೈವದ ಪ್ರಸಾದ ವಿತರಣೆ, ಶ್ರೀ ಕುಡುಮ ದೈವದ ನೇಮ, ಅನ್ನಸಂತರ್ಪಣೆ, ರಾತ್ರಿ ಹರಕೆಯ ಶ್ರೀ ಪಂಜುರ್ಲಿ ದೈವದ ಗುರ್ಜಿನೇಮ ಜರಗಲಿದೆ. ಮೇ
5ಕ್ಕೆ ಪ್ರಾತಃಕಾಲ : ಪ್ರಸಾದ ವಿತರಣೆ, ಬೆಮ್ಮರಿಗೆ ಹಾಲಿಕ್ಕಿ ನೈವೇದ್ಯ ಸಮರ್ಪಣೆ ನಂತರ ಪೆರ್ನಲ, ಮಾನ್ಯಲ ದೈವಗಳಿಗೆ ಮಂಜ ಸೇವೆಯೊಂದಿಗೆ ವಾರ್ಷಿಕ ನೇಮೋತ್ಸವ ಸಂಪನ್ನಗೊಳ್ಳಲಿದೆ.

0 Comments