ಪೆರ್ಲ : ಮತಾಂತರ ಯತ್ನದ ಬಗ್ಗೆ ಪ್ರಶ್ನಿಸಿದ ಹಿಂದೂ ಕಾರ್ಯಕರ್ತನ ಮೇಲೆ ಪೇಟೆಯ ಅಂಗಡಿಯೊಂದರಲ್ಲಿ ಹಲ್ಲೆ ನಡೆದಿರುವ . ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವಿನಾಶ್ (23) ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪುತ್ತೂರು ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಅವಿನಾಶ್ ಅವರ ಆರೋಗ್ಯ ವಿಚಾರಿಸಿತು. ಗಾಯಾಳುವಿಗೆ ಧೈರ್ಯ ತುಂಬಿದ ನಿಯೋಗದ ಸದಸ್ಯರು ಘಟನೆ ಕುರಿತು ಮಾಹಿತಿ ಪಡೆದುಕೊಂಡು ಉನ್ನತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


0 Comments