Ticker

6/recent/ticker-posts

Ad Code

ಇಂದಿನಿಂದ ಪೆರ್ಲ ಬೀಡು ನೂತನ ತರವಾಡು ಮನೆಯ ಗೃಹಪ್ರವೇಶ; ಶ್ರೀ ದೈವಗಳ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ

ಪೆರ್ಲ: ಪೆರ್ಲ ಕನ್ನಟಿಕಾನ ಬಳಿಯ ಪೆರ್ಲ ಬೀಡು ನೂತನ ತರವಾಡು ಮನೆಯ ಗೃಹಪ್ರವೇಶ, ಶ್ರೀ ದೈವಗಳ ಬಿಂಬ ಪ್ರತಿಷ್ಠಾ ಕಲಶಾಭಿಷೇಕ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ನೇತೃತ್ವದಲ್ಲಿ ಮೇ 20 ಮತ್ತು 21ರಂದು ಜರುಗಲಿದೆ. 

ಮೇ 20ರಂದು ಸಂಜೆ 5ಕ್ಕೆ ತಂತ್ರಿಗಳ ಆಗಮನ, ರಾತ್ರಿ 7ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಹಾಂತ ಹಾಗೂ ಪ್ರಸಾದ ವಿತರಣೆ, ಮೇ 21ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಭಜನಾ ಕಾರ್ಯಕ್ರಮ, 7.47ರ ಮಿಥುನಲಗ್ನದಲ್ಲಿ ಗೃಹಪ್ರವೇಶ, 10.28ರ ಕರ್ಕಾಟಕ ಲಗ್ನದಲ್ಲಿ ದೈವಗಳ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 2ರಿಂದ ಯಕ್ಷ-ಗಾನ ವೈಭವ ನಡೆಯಲಿದೆ.

Post a Comment

0 Comments