ಕಾಸರಗೋಡು : ಪೆರಿಯಾ ಕಲ್ಯೋಟು ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಪೆರೋಲ್ ನೀಡಿದ ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹಾ ಅವರನ್ನು ಕೇಳಿದ್ದಾರೆ.
ಎಲ್. ಡಿ. ಎಫ್.ನೇತೃತ್ವದ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಕಚೇರಿಯಿಂದ ಹೊರಡುವ ಮುನ್ನ ಜೈಲು ಇಲಾಖೆ ಈ ಪೆರೋಲ್ ಪ್ರಕ್ರಿಯೆಗಳಿಗೆ ಅನುಮತಿ ನೀಡಿತು. ಪ್ರಕರಣದ ಮೊದಲ ಆರೋಪಿ ಸೇರಿದಂತೆ ಐದು ಆರೋಪಿಗಳಿಗೆ ಪ್ರಸ್ತುತ ಪೆರೋಲ್ ನೀಡಲಾಗಿತ್ತು.
ಪೆರೋಲ್ ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಕೂಲಂಕಷವಾಗಿ ತನಿಖೆ ಮಾಡಿ ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸುವಂತೆ ಅವರನ್ನು ಕೇಳಲಾಗಿದೆ. ವರದಿಯನ್ನು ಸ್ವೀಕರಿಸಿದ ನಂತರ, ಸತ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಿಯುಕ್ತ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.

0 Comments