ಕುಂಬಳೆ : ಸೀತಾಂಗೋಳಿ-ಪೆರ್ಲ-ಬದಿಯಡ್ಕ-ಮುಳ್ಳೇರಿಯಾ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಿಸಬೇಕೆಂದು ಕುಂಬಳೆ ವ್ಯಾಪಾರಿ ಯುವ ಘಟಕವು ಆಗ್ರಹಿಸಿದೆ.
ಯುವ ಘಟಕದ ಪದಾಧಿಕಾರಿಗಳು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಅವರಿಗೆ ಮನವಿ ಸಲ್ಲಿಸಿದರು. ವ್ಯಾಪಾರಿ ಯುವ ಘಟಕದ ಪದಾಧಿಕಾರಿಗಳಾದ ಅಶ್ರಫ್ ಕೆ.ಎಂ. ಸ್ಕೈಲರ್, ಹೈದರ್ ಅಲಿ ಎ ಮತ್ತು ಅಬೂಬಕರ್ ಸಿದ್ದೀಕ್ ಅವರು ಮನವಿ ಸಲ್ಲಿಸಿದರು.

0 Comments