Ticker

6/recent/ticker-posts

Ad Code

10 ವರ್ಷದ ಬಾಲಕಿಗೆ ಫಿನೋಯಿಲ್ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಬಂಧನ

 

ಕಾಸರಗೋಡು : 10 ವರ್ಷದ ಬಾಲಕಿಗೆ ಫಿನೋಯಿಲ್  ಕುಡಿಸಿದ ಬಳಿಕ ತಾನು  ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ ಹಾಗೂ ಪೋಕ್ಸೋ ಸೆಕ್ಷನ್ ಅಡಿಯಲ್ಲಿ ಬಂಧಿಸಲಾದ 28 ವರ್ಷದ ಯುವಕನನ್ನು ಎರಡು ವಾರಗಳ ಕಾಲ ರಿಮಾಂಡ್ ವಿಧಿಸಲಾಗಿದೆ.  

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಆರೋಪಿ ಬಾಲಕಿಯ ತಂದೆಯ ಆಪ್ತ ಸ್ನೇಹಿತ. ಈ ಕಾರಣಕ್ಕಾಗಿ ಆತ ಆಗಾಗ್ಗೆ ಬಾಲಕಿಯ ಮನೆಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ನಡೆದ   ಕೆಲವು ಕ್ರಮಗಳನ್ನು ತಂದೆ ಪ್ರಶ್ನಿಸಿದ್ದು ಈ ಕಾರಣದ ನಂತರ ಬಾಲಕಿಗೆ ಫಿನೋಯಿಲ್ ಕುಡಿಸಿ ನಂತರ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಾಲಕಿಯ ದೇಹದೊಳಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಪಿನೋಯಿಲ್ ಅಂಶ ಪ್ರವೇಶಿಸಿತ್ತು. ಆದ್ದರಿಂದ ಯಾವುದೇ ಅಪಾಯವಾಗಲಿಲ್ಲ. ಆದರೆ ಆತ್ಮಹತ್ಯೆಗೆ ಯತ್ನಿಸಿದ ಯುವಕ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಯಿತು. ಡಿಸ್ಚಾರ್ಜ್ ಆದ ನಂತರ, ಆರೋಪಿಯನ್ನು ಇದೀಗ ಬದಿಯಡ್ಕ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪಿ. ಅನೂಪ್ ಕೃಷ್ಣ ಬಂಧಿಸಿದ್ದಾರೆ.

Post a Comment

0 Comments