Ticker

6/recent/ticker-posts

Ad Code

ಕಾಸರಗೋಡಲ್ಲಿ ರಂಗ ಗೀತೆ ಮತ್ತು ಏಕ ಪಾತ್ರಾಭಿನಯ ಸ್ಪರ್ಧೆ


ಕಾಸರಗೋಡು : ಮೇ ತಿಂಗಳ 21,22,23,24 ಪ್ರತಿ ದಿನ ಸಂಜೆ 7-00 ಗಂಟೆಗೆ ಕಾಸರಗೋಡು ಪಿಲಿಕುಂಜೆ  ಹಾಲ್ ನಲ್ಲಿ ಬೆಂಗಳೂರಿನ ರಂಗ ಶಂಕರ ನಡೆಸುವ ಕನ್ನಡ ನಾಟಕೋತ್ಸವದ ಅಂಗವಾಗಿ ಕನ್ನಡ, ಮಲಯಾಳಂ, ತುಳು ರಂಗಗೀತೆ ಗಳ ಮತ್ತು ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅವಧಿ 5ನಿಮಿಷವಾಗಿದ್ದು ಸೀನಿಯರ್, ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. 

ಸ್ಪರ್ಧೆಗಳಿಗೆ ಸೇರಲು ಇಚ್ಛಿಸುವವರು ತಾ.15/5/2026 ರ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ಹೆಚ್ಚಿನ ವಿವರಗಳಿಗೆ ಪಿ.ದಿವಾಕರ ಅಶೋಕ ನಗರ, ಕಾಸರಗೋಡು. ಮೊಬೈಲ್ :9495104563 ವಾಟ್ಸೆಪ್ ಅಥವಾ ಮೊಬೈಲ್ ನಲ್ಲಿ ನೋಂದಣಿ ಮಾಡಬಹುದು. ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಮೇ 21ರಂದು ಮೊದಲನೇ ದಿನ ಸ್ಪರ್ಧೆಗಳ ಮಾಹಿತಿ ನೀಡಲಾಗುವುದು. ಮೇ 22,23 ರಂದು ಸಂಜೆ 5 ಗಂಟೆಯ ನಂತರ ಸ್ಪರ್ಧೆಗಳನ್ನು ನಡೆಸಲಾಗುವುದು. ಮೇ 24 ರಂದು ಸಂಜೆ ವಿಜೇತರಿಗೆ ಬಹುಮಾನ ನೀಡಲಾಗುವುದು. ರಂಗ ಶಂಕರ ನಡೆಸುವ ನಾಟಕೋತ್ಸವದಲ್ಲಿ ಕರ್ನಾಟಕದ ಪ್ರಸಿದ್ಧ ರಂಗ ತಂಡಗಳು ಪ್ರದರ್ಶಿಸುವ ಎಲ್ಲಾ ನಾಲ್ಕು ನಾಟಕಗಳನ್ನು ನೋಡಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.

Post a Comment

0 Comments