ಕಾಸರಗೋಡು : ಮಂಗಳೂರಿನಿಂದ ಕೊಯಮತ್ತೂರಿಗೆ ಚಲಿಸುತ್ತಿದ್ದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಾಞಂಗಾಡ್ ಬಳಿಯ ಪೂಚಕ್ಕಾಡಿನಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು ರೈಲು ಪ್ರಯಾಣಿಕೆ ನೀಲೇಶ್ವರದ ಅನಿತಾ (58) ಅವರ ಮುಖಕ್ಕೆ ಗಾಯವಾಗಿದೆ. ರೈಲಿಗೆ ಹೊರಗಿನಿಂದ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಅನಿತಾ ಮಂಗಳೂರಿನ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ಮನೆಗೆ ಹಿಂತಿರುಗುತ್ತಿದ್ದರು. ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಸಾಮಾನ್ಯ ಕೋಚ್‌ನಲ್ಲಿ ಕಿಟಕಿಯ ಬಳಿಯ ಸೀಟಿನಲ್ಲಿ ಅವರು ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

0 Comments