Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಿಯಂತ್ರಣ ತಪ್ಪಿದ ಕಾರು ನಿರ್ಮಾಣ ಹಂತದ ಮನೆಯ ಮೇಲೆ ಪಲ್ಟಿ; ಓರ್ವನಿಗೆ ಗಾಯ

ಬೇಡಗ : ನಿಯಂತ್ರಣ ತಪ್ಪಿದ ಇನ್ನೋವಾ ಕಾರೊಂದು ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲೆ ಪಲ್ಟಿಯಾದ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವರಿಗೆ ಗಾಯವಾಗಿದೆ. ಕಣ್ಣೂರು ಎಟ್ಟಿಕ್ಕುಳ ನಿವಾಸಿ ಮಸೂದ್ ತಂಙಳ್ ಗಾಯಗೊಂಡವರು. ಪರಪ್ಪನಂಗಾಡಿ ನಿವಾಸಿ ಅಬ್ದುಲ್ಲಾ ಕಾರು ಚಲಾಯಿಸುತ್ತಿದ್ದರು. ಶುಕ್ರವಾರ ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದೆ.

ಪುತ್ತೂರು ಭಾಗದಿಂದ ಪೊಯಿನಾಚಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಳ್ಳತ್ತಿಂಕಾಲ್ ಪಯ್ಯಂಗಾನದ ವಿದ್ಯುತ್ ಕಾರ್ಮಿಕ ಇ. ಗೋಪಿನಾಥ್ ಅವರ ನಿರ್ಮಾಣ ಹಂತದ ಮನೆಯ ಮೇಲೆ ಬಿದ್ದಿದೆ. ಅಪಘಾತದ ವೇಳೆ ಮನೆಯ ಸಮೀಪ ಕೆಲಸ ಮಾಡುತ್ತಿದ್ದ ಗೋಪಿನಾಥ್ ಓಡಿ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು.

Post a Comment

0 Comments

ಜಾಹೀರಾತು

Responsive Advertisement