Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಲ್ಲಂಗುಡೇಲುನಲ್ಲಿ ಗೆಳೆಯರ ಬಳಗದಿಂದ ಸ್ವಾತಂತ್ರೋತ್ಸವ ಆಚರಣೆ

ಮಜಿಬೈಲು : ಗೆಳೆಯರ ಬಳಗ (ರಿ) ಬಲ್ಲಂಗುಡೇಲು ಮಜಿಬೈಲು ವತಿಯಿಂದ 80 ನೇ‌ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಘದ ಕಟ್ಟಡದ ಆವರಣದಲ್ಲಿ ಆಚರಿಸಲಾಯಿತು. ಬಳಗದ ಅಧ್ಯಕ್ಷ ಕಾರ್ತಿಕ್ ಶೆಟ್ಟಿ ಮಜಿಬೈಲು ಧ್ವಜಾರೋಹಣಗೈದು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ವಿವರಿಸಿ,  ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಬಳಗದ ಗೌರವ ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಮಾಜಿ ಅಧ್ಯಕ್ಷ ಮಾದವ ಉಳಿಯ, ಪ್ರದಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬಲ್ಲಂಗುಡೇಲು, ಕೋಶಾಧಿಕಾರಿ ಬಶೀರ್ ಮೂಡಂಬೈಲು, ಬಳಗದ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಕರಿಬೈಲು, ಕಿರಣ್ ಆಳ್ವ ಪಟ್ಟತ್ತಮೊಗರು, ರಾಜೇಶ್ ಬಲ್ಲಂಗುಡೇಲು, ಸುಂದರ ಕರಿಬೈಲು, ಸೀತರಾಮ ಗಾಣದಮೂಲೆ, ರಂಜೀತ್ ಬಲ್ಲಂಗುಡೇಲು, ಸತೀಶ್ ಶೆಟ್ಟಿ ಕರಿಬೈಲು, ಕೇಶವ ಹೊಸಗದ್ದೆ, ಜಯಕುಮಾರ್ ಕರಿಬೈಲು, ಯತೀಶ್ ಹೊಸಗದ್ದೆ ಹಾಗೂ ಬಳಗದ ಸದಸ್ಯರು ಉಪಸ್ಥಿತರಿದ್ದರು. ಬಳಗದ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬಲ್ಲಂಗುಡೇಲು ಸ್ವಾಗತಿಸಿ, ಕೋಶಾಧಿಕಾರಿ ಬಶೀರ್ ಮೂಡಂಬೈಲು ಧನ್ಯವಾದವಿತ್ತರು. ಕಾರ್ಯಕ್ರಮದ ಕೊನೆಗೆ ಅಧ್ಯಕ್ಷರ ಕಾರ್ತಿಕ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಲಘು ಉಪಹಾರ ವಿತರಿಸಲಾಯಿತು.


Post a Comment

0 Comments

ಜಾಹೀರಾತು

Responsive Advertisement