Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಕೆಪಿಎ ಕಾಸರಗೋಡು ವೆಸ್ಟ್ ಯೂನಿಟ್ ನಿಂದ ಸ್ವಾತಂತ್ರ್ಯ ದಿನಾಚರಣೆ

ಕಾಸರಗೋಡು : ಆಲ್ ಕೇರಳ ಫೊಟೊಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯುನಿಟ್ ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎಕೆಪಿಎ ಕಾಸರಗೋಡು ವಲಯದ ಸದಸ್ಯರ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಓನ್ ಲೈನ್ ಚಿತ್ರ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಎಕೆಪಿಎ ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್ ಅವರು ಮಕ್ಕಳಿಗೆ ದೇಶಕ್ಕಾಗಿ ತ್ಯಾಗ ಮಾಡಿದ ಹೋರಾಟಗಾರರ ಚಿತ್ರ ಸ್ಪರ್ಧೆ ಏರ್ಪಡಿಸಿ ಅವರ ನೆನಪನ್ನು ಮಕ್ಕಳಲ್ಲಿ ಮೂಡಿಸಿದುದು ಗಮನಾರ್ಹ ಎಂದು ನುಡಿದರು. ವಲಯ ಅಧ್ಯಕ್ಷ ವಾಮನ್ ಕುಮಾರ್, ಕಾರ್ಯದರ್ಶಿ ಸರಿತಾ ಮುಳ್ಳೇರಿಯಾ ಶುಭ ಹಾರೈಸಿ ಮಾತನಾಡಿದರು. ಜಿಲ್ಲಾ ಸದಸ್ಯ ಮೈಂದಪ್ಪ ಕೆ.ಎಂ, ಜಿಲ್ಲಾ ಜತೆಕಾರ್ಯದರ್ಶಿ ಮನು ಎಲ್ಲೋರ, ಕಾಸರಗೋಡು ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಪಡೆದ ನಂದಲಕ್ಷ್ಮಿ, ದ್ವಿತೀಯ ಆಶ್ರಿತ್ ರೈ, ತೃತೀಯ ಅಹಲ್ ಇವರಿಗೆ ಸ್ಮರಣಿಕೆ ಮತ್ತು ಸರ್ಟಿಫಿಕೇಟ್ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸರ್ಟಿಫಿಕೇಟ್ ನೀಡಲಾಯಿತು. ಆಶ್ರಿತ್ ರೈ ವಂದೇ ಮಾತರಂ ಹಾಡಿದರು. ಕಾರ್ಯದರ್ಶಿ  ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ಧನ್ಯವಾದ ನೀಡಿದರು.

Post a Comment

0 Comments

ಜಾಹೀರಾತು

Responsive Advertisement