Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೈವಳಿಕೆಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಐ ಕಾಲ್ನಡೆ ಪ್ರಚಾರ ಜಾಥಾ


ಪೈವಳಿಕೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಫೆಡರಲಿಸಂನ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಸೆಪ್ಟೆಂಬರ್ 1ರಂದು ನಡೆಯಲಿರುವ ‘ದೆಹಲಿ ಚಲೋ’ ಕಾರ್ಯಕ್ರಮದ ಅಂಗವಾಗಿ ಕಾಲ್ನಡೆಗೆ ಪ್ರಚಾರ ಜಾಥಾ ನಡೆಯಿತು.

ಸಿಪಿಐ ಪೈವಳಿಕೆ ಲೋಕಲ್ ಸಮಿತಿಯ ನೇತೃತ್ವದಲ್ಲಿ  ಬಾಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಕಾರ್ಮಿಕರು, ರೈತರು, ಯುವಜನರು ಹಾಗೂ ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಗೆ ಹೋರಾಟವನ್ನು ಬಲಪಡಿಸುವ ಅಗತ್ಯವನ್ನು ಮುಖಂಡರು ಒತ್ತಿಹೇಳಿದರು.

ಕಾರ್ಯಕ್ರಮವನ್ನು ಕಾಂಞಂಗಾಡಿನ ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಮಂಡಲ ಸಮಿತಿ ಸದಸ್ಯರಾದ ಚಣಿಯಾ ಕೊಮ್ಮಂಗಳ ಅವರು ವಹಿಸಿದ್ದರು. ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಜಿಲ್ಲಾ ಸಮಿತಿ ಸದಸ್ಯರಾದ ಅಜಿತ್ ಎಂ.ಸಿ. ಲಾಲ್‌ಬಾಗ್, ರೇಖಾ ಚಿಪ್ಪಾರ್, ಮಂಡಲ ಸಮಿತಿ ಸದಸ್ಯರಾದ ಲಾರೆನ್ಸ್ ಡಿ. ಸೋಜ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಅಗತ್ಯವನ್ನು ಮುಖಂಡರು ವಿವರಿಸಿದರು. ಕಾರ್ಮಿಕರು, ರೈತರು, ಯುವಜನರು ಹಾಗೂ ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಗೆ ಹೋರಾಟವನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.

ಸಮಾರೋಪ ಸಮಾರಂಭವು  ಬಾಯಿಕಟ್ಟೆಯಲ್ಲಿ ನಡೆಯಿತು. ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂ.ಸಿ. ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಸಮಾರೋಪ ಸಮಾರಂಭವನ್ನು ಮಾಜಿ ಸಚಿವರಾದ ಇ. ಚಂದ್ರಶೇಖರನ್ ಅವರು ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಕೇಶವ ಬಾಯಿಕಟ್ಟೆ ಹಾಗೂ ಈಶ್ವರ ನಾಯ್ಕ್ ಪೆರ್ಮುದೆ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದರು.

ಪ್ರಚಾರ ಜಾಥಾವನ್ನು ಜಾಥಾ ನಾಯಕ ಸುದಾನಂದ ಎ. ಹಾಗೂ ಜಾಥಾ ಮ್ಯಾನೇಜರ್ ವಲ್ಟಿ ಡಿ. ಸೋಜ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸೆಪ್ಟೆಂಬರ್ 1ರಂದು ನಡೆಯಲಿರುವ ‘ದೆಹಲಿ ಚಲೋ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಪಕ್ಷದ ಮುಖಂಡರು ಕರೆ ನೀಡಿದರು.

Post a Comment

0 Comments

ಜಾಹೀರಾತು

Responsive Advertisement