Ticker

6/recent/ticker-posts

‌ಮೆತ್ತಾಂಫಿಠಮಿನ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ ಅಬಕಾರಿ ಅಧಿಕಾರಿಗಳು


 ನೆಲ್ಲಿಕಟ್ಟೆ: ‌ಮೆತ್ತಾಂಫಿಠಮಿನ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ನೆಕ್ರಾಜೆ ಪೊಟ್ಟಿಪಳ್ಳ ಚೆನ್ನಡ್ಕ  ಬಾಡಿಗೆ ಕ್ವಾಟರ್ಸಿನಲ್ಲಿ ವಾಸಿಸುವ ಕೆ.ಮುಹಮ್ಮದ್ ಹನೀಫ(38) ಬಂಧಿತ ಆರೋಪಿ.



 ಕುಂಬಳೆ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಕೆ.ಡಿ.ಮಾಥ್ಯು ಹಾಗೂ ಸಂಗಡಿಗರು ನಡೆಸಿದ ದಾಳಿಯಲ್ಲಿ ಈತ ಸಿಕ್ಕಿ ಬಿದ್ದಿದ್ದಾನೆ. ದೂರು ಲಭಿಸಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಈತನ ಮೇಲೆ ನಿಗಾ ಇರಿಸಲಾಗಿತ್ತು. ಎಕ್ಸೈಸ್ ಕಮೀಶನರ್ ಪಿ.ಪಿ.ಜನಾರ್ದನ ಅವರ ಉಪಸ್ಥಿತಿಯಲ್ಲಿ ಈತನ ಕಿಸೆಯಿಂದ 4.553 ಗ್ರಾಂ, ಬೈಕಿನ ಸೀಟಿನಡಿಯಿಂದ 1.47 ಗ್ರಾಂ,  20 ಸಾವಿರ ರೂ, ಮೊಬೈಲು ಫೋನು ಎಂಬಿವುಗಳನ್ನು ವಶಪಡಿಸಲಾಗಿದೆ. ಅಧಿಕಾರಿಗಳಾದ ಕೆ.ವಿ.ಮುರಳಿ, ಸಿಕೆವಿ ಸುರೇಶ್, ವಿ.ವಿ.ಸಂತೋಷ್, ಕೆ.ಆರ್.ಪ್ರಜಿತ್, ಕೆ.ನೌಷಾದ್, ಸಿ.ಅಜೀಶ್, ಜಿತೇಂದ್ರನ್, ಸೋನು ಸೆಬಾಸ್ಟಿಯನ್, ಸಿಜಿನ್ ಸಿ, ಅಥುಲ್ ಟಿ.ವಿ, ಟಿ.ವಿ.ಅಖಿಲೇಶ್, ಅಶ್ವತಿ ವಿ.ವಿ, ಚಾಲಕ ಸಜೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments