ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕಿನ ಕೇಪು ವಲಯದ ಮಾಣಿಲ ವ್ಯವಸಾಯ ಸೇವಾ ಸಹಕಾರ ಭವನದಲ್ಲಿ ಕಳೆದ 3 ತಿಂಗಳಿನಿಂದ ಹೊಲಿಗೆ ತರಬೇತಿಯನ್ನು ಆರಂಭಿಸಿದ್ದು ಈ ತರಬೇತಿಯಲ್ಲಿ 20 ಮಂದಿ ಸದಸ್ಯರು ಪ್ರಯೋಜನವನ್ನು ಪಡೆದಿದ್ದು, ಬೆರಿಪದವು ಹೊಲಿಗೆ ಕೇಂದ್ರದ ಶಿಕ್ಷಕರಾದ ಸರೋಜಿನಿ ಇವರು ತರಬೇತಿಯನ್ನು ನೀಡಿರುತ್ತಾರೆ.
ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮವು ಮಾಣಿಲ ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು ನೇರವೇರಿಸಿದರು.ತಾಲೂಕಿನ ಯೋಜನಾಧಿಕಾರಿಯವರಾದ ರಮೇಶ್, ಪಂಚಾಯತ್ ಸದಸ್ಯರಾದ ರಾಜೇಶ್ ಬಾಳೆಕಲ್ಲು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಬೋಳಿಜಡ್ಕ ಸಂಘದ ಸದಸ್ಯರಾದ ನವೀನ್ ಕುಮಾರ್ ರವರ ಅಣ್ಣ ರವಿಚಂದ್ರರವರಿಗೆ ಕ್ಷೇತ್ರದಿಂದ ಮಂಜೂರಾದ ಕ್ರಿಟಿಕಲ್ ಫಂಡ್ ನ ಮಂಜೂರಾತಿ ಪತ್ರವನ್ನು ತಾಲ್ಲೂಕು ಯೋಜನಾಧಿಕಾರಿ ಹಸ್ತಾಂತರಿಸಿದರು. ಟ್ರೈಲರಿಂಗ್ ತರಬೇತಿ ಪಡೆದುಕೊಂಡ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂಧರ್ಭ ವಲಯ ಮೇಲ್ವಿಚಾರಕರಾದ ಜಗದೀಶ್, ಟೈಲರಿಂಗ್ ಶಿಕ್ಷಕಿ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಸದಸ್ಯರು , ಸೇವಾಪ್ರತಿನಿಧಿ ಗುಲಾಬಿ ಉಪಸ್ಥಿತರಿದ್ದರು.ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ಶಶಿಕಲಾ ಸ್ವಾಗತಿಸಿ ಸೇವಾ ಪ್ರತಿನಿಧಿ ಗುಲಾಬಿ ಮಾಣಿಲ ವಂದಿಸಿದರು.ಜ್ಞಾನದೀಪ ಶಿಕ್ಷಕಿ ನಳಿನಾಕ್ಷಿ ನಿರೂಪಿಸಿದರು.
0 Comments